ಮೈಸೂರು

ಬಹುಜನ ವಿದ್ಯಾರ್ಥಿ ಸಂಘ  ವತಿಯಿಂದ ಫೆ.2ರಂದು “ಬೃಹತ್ ಸಂವಿಧಾನ ಜಾಗೃತಿ ಸಮಾವೇಶ”

ಮೈಸೂರು,ಜ.27:- ಬಹುಜನ ವಿದ್ಯಾರ್ಥಿ ಸಂಘ   ಮೈಸೂರು ವತಿಯಿಂದ  02-02-2020ರ ಭಾನುವಾರ, ಬೆಳಿಗ್ಗೆ 10.30 ಕ್ಕೆ “ಬೃಹತ್ ಸಂವಿಧಾನ ಜಾಗೃತಿ ಸಮಾವೇಶ” ಕಾರ್ಯಕ್ರಮವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಯೋಜಕ ಗಣೇಶ್ ಮೂರ್ತಿ ಹೆಚ್.ಎಸ್.ತಿಳಿಸಿದರು.

ಅವರಿಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನವೆಂಬರ್ 26 ರಿಂದ ಜನವರಿ 26ರ ವರೆಗೆ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 30,000 ಪ್ರಬಂಧಗಳು ಬಂದಿದ್ದು, ವಿಜೇತರಾದರಿಗೆ ಪುರಸ್ಕಾರವನ್ನು ನೀಡಲಿದ್ದೇವೆ. ಹಾಗೆಯೇ, “ಭಾರತಕ್ಕೆ ಬೇಕಿರುವುದು EEE ಹೊರತು CAA ಅಲ್ಲ” ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು   ಹಮ್ಮಿಕೊಂಡಿದ್ದೇವೆ.

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂಗಳ ಬಹುಮಾನ ವಿತರಣಾ ಕಾರ್ಯಕ್ರಮ.   ಶ್ರೀಮತಿ ದೊಡ್ಡ ಸಿದ್ದಮ್ಮ ಮತ್ತು ಶ್ರೀ ಕುಳ್ಳನಂಜಯ್ಯ ದಂಪತಿಗಳ ಸ್ಮರಣಾರ್ಥ ಅದ್ವಿತೀಯ ಸಾಧನೆ ಮಾಡಿರುವ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಪ್ರಶಸ್ತಿ ಪ್ರದಾನ ಮತ್ತು 1 ಲಕ್ಷ ರೂ ನಗದು ಪುರಸ್ಕಾರ,  ನಾವು ಭಾರತೀಯರು – Voice of Nation’ ಧ್ವನಿ ಸುರುಳಿ ಬಿಡುಗಡೆ,  ಪುಸ್ತಕಗಳ ಬಿಡುಗಡೆ   ಭಾರತ ಸಂವಿಧಾನ-BVS,   ಭಾರತ ಸಂವಿಧಾನ ಮತ್ತು ಡಾ. ಅಂಬೇಡ್ಕರ್‌-ಡಾ.ಶಿವಕುಮಾರ್, ಸಂವಿಧಾನ ಕೈಪಿಡಿ-ಸೋಸಲೆ ಗಂಗಾಧರ, ನೆನಪಾದ ವಿಮೋಚಕಿ- ಮಲ್ಲಿಕಾರ್ಜುನ್ ಕನಕಪುರ, ನಾವು ಭಾರತೀಯರು ಧ್ವನಿ ಸುರುಳಿಯಲ್ಲಿರುವ ಹಾಡುಗಳಿಗೆ ನೃತ್ಯ ರೂಪಕಗಳು, ವಿವಿಧ ಜಿಲ್ಲೆಗಳ ಕಲಾ ತಂಡಗಳಿಂದ ಆಯಾ ಜಿಲ್ಲೆಗಳ ವಿಶೇಷತೆಗೆ ಸಂಬಂಧಿಸಿದಂತಹ ಹಾಡು, ನೃತ್ಯ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ, ಬಿ.ಎಂ ಲಿಂಗರಾಜು, ಗಣೇಶ್ ಕೆ.ಪಿ ಪುತ್ತೂರು, ಮತ್ತು ಸಿದ್ದೀಕ್ ನೆಲ್ಲಿಗುಡ್ಡೆ ಹಾಗೂ ರಾಷ್ಟ್ರಧ್ವನಿ ತಂಡದಿಂದ BVS ಸಾಧನೆಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ವಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: