ಮೈಸೂರು

ಮೈಸೂರು ದಸರಾ ಹಿನ್ನೆಲೆ: ಅಭಿವೃದ್ಧಿಯತ್ತ ಹೋಟೆಲ್ ಉದ್ಯಮ

ದಸರಾ ಸಮೀಪಿಸುತ್ತಿದ್ದಂತೆ ಮೈಸೂರಿನಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಬಲಬಂದಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರು ವಿಶ್ವದಾದ್ಯಂತ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ದಸರಾ ಆರಂಭಕ್ಕೆ ಮೂರು ಬಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ದರಸಾ ಸಮಯದಲ್ಲಿ ಮೈಸೂರಿನಲ್ಲಿ ಉದ್ಯಮ-ವ್ಯವಹಾರಗಳು ಶೇ.50ರಿಂದ 70ರಷ್ಟು ಏರಿಕೆಯಾಗುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನ ಸಂಸ್ಕೃತಿ ಕಲರವದ ಮುದ ಪಡೆಯಲು ಹೊರರಾಜ್ಯ ಮತ್ತು ಹೊರದೇಶದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಶೇ.20ರಿಂದ 30ರಷ್ಟು ರಿಯಾಯಿತಿ ದರದಲ್ಲಿ ಪ್ರವಾಸಿಗರಿಗೆ ರೂಮ್ ಲಭ್ಯವಿದೆ. ಆದರೆ, ಇಲ್ಲಿಯವರೆಗೆ 278 ಲಾಡ್ಜ್‍ಗಳ 6,200 ಕೊಠಡಿಗಳಲ್ಲಿ ಕೇವಲ ಶೇ.20ರಿಂದ 25ರಷ್ಟು ರೂಮ್‍ಗಳು ಮಾತ್ರ ಭರ್ತಿಯಾಗಿವೆ. ಕಾವೇರಿ ನೀರು ವಿವಾದದ ಹಿನ್ನೆಲೆಯಲ್ಲಿ ಮೈಸೂರು ದಸರಾಗೆ ಆಗಮಿಸುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಸೆ.27ರ ಸುಪ್ರೀಂ ಕೋರ್ಟಿನ ವಿಚಾರಣೆ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಸಿಟಿ ಟುಡೇಗೆ ತಿಳಿಸಿದ್ದಾರೆ.

‘ವಿಶ್ವ ಪ್ರವಾಸೋದ್ಯಮ ದಿನ’ದ ಅಂಗವಾಗಿ ಮೈಸೂರು ಟ್ರಾವೆಲ್ ಏಜೆಂಟ್ಸ್ ಸಂಘ ಮತ್ತು ಮೈಸೂರು ಹೋಟೆಲ್ ಮಾಲೀಕರ ಸಂಘ ಜಂಟಿಯಾಗಿ ಮಂಗಳವಾರದಂದು ಪಾರಂಪರಿಕ ನಗರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಿದೆ. ವರಾಹ ಗೇಟ್ ಮತ್ತು ಅಂಬಾ ವಿಲಾಸ ಅರಮನೆ ಬಳಿ ಪ್ರವಾಸಿಗರಿಗೆ ಗುಲಾಬಿ ಮತ್ತು ಸ್ವೀಟ್ ನೀಡಿ ಸಾಂಪ್ರದಾಯಿಕವಾಗಿ ದಸರಾ ನಾಡಿಗೆ ಸ್ವಾಗತಿಸಲಾಗುವುದು.

ಪ್ರವಾಸಿಗರಿಗೆ ಯಾವುದೇ ಪ್ರವಾಸ ಕಾರ್ಯಕ್ರಮದ ಕೊಡುಗೆ ಬಗ್ಗೆ ನಾವು ಇಲ್ಲಿಯವರೆಗೆ ತೀರ್ಮಾನ ಕೈಗೊಂಡಿಲ್ಲ. ಯಾವುದಾದರೂ ಗುಂಪು ಪ್ರೋತ್ಸಾಹಕ ದರದೊಂದಿಗೆ ಮುಂದೆ ಬಂದಲ್ಲಿ ಅವರೊಂದಿಗೆ ಚರ್ಚಿಸಿ ಅತ್ಯಾಕರ್ಷಕ ಪ್ಯಾಕೇಜ್‍ಗಳನ್ನು ನೀಡುತ್ತೇವೆ. ಕಾವೇರಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್‍ ತೀರ್ಪಿನ ನಂತರ ನಗರದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಸಿಟಿ ಟುಡೇ ಜತೆ ಮಾತನಾಡಿದ ಮೈಸೂರು ಟ್ರಾವೆಲ್ ಏಜೆಂಟ್ಸ್ ಕಾರ್ಯದರ್ಶಿ ಅನಿಲ್ ರಾಜ್ ತಿಳಿಸಿದ್ದಾರೆ.

ಹೊರ ರಾಜ್ಯದವರು ಮಾತ್ರವಲ್ಲದೆ, ಬೆಂಗಳೂರಿನ ಯಾತ್ರಿಗಳು ಮೈಸೂರಿಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವಾರ ನಡೆದ ಗಲಭೆಯಿಂದ ಭಾರಿ ಬದಲಾವಣೆಯಾಗಿದೆ. ಪ್ರವಾಸಿಗರಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಕಾರ್ಯಕ್ರಮವನ್ನು ರದ್ದು ಮಾಡಿ, ಹತ್ತಿರದ ಸ್ಥಳಗಳಿಗೆ ಪ್ರವಾಸಿಗರನ್ನು ಸ್ವಾಗತಿಸಲಾಗುವುದು ಎಂದರು.

ಕೇರಳ ಗಡಿಯಲ್ಲಿ ತೆರಿಗೆ ದರ ಏರಿಕೆ: ಟೂರಿಸ್ಟ್ ವಾಹನಗಳಿಗೆ ಕೇರಳಕ್ಕೆ ಪ್ರವಾಸ ಯೋಜಿಸುವುದು ಕಷ್ಟವಾಗಿದೆ. ಪ್ರವೇಶ ತೆರಿಗೆ ಭರಿಸಲು ಕಷ್ಟವಾದ ದರಕ್ಕೆ ಏರಿಕೆಯಾಗಿದೆ. ಟೆಂಪೋ ಟ್ರಾವೆಲರ್‍ಗೆ ಪ್ರವೇಶ ದರ 70 ಸಾವಿರದಿಂದ 1 ಲಕ್ಷದವರೆಗೆ ಇದೆ. ಅವರಲ್ಲಿ ದರ ಕಡಿಮೆ ಮಾಡುವಂತೆ ಕೋರಿದಾಗ, ಕರ್ನಾಟಕದಲ್ಲಿ ಮೊದಲು ದರ ಕಡಿತಗೊಳಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ದರ ಕಡಿಮೆಗೊಳಿಸುವಂತೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ದಸರಾಗೆ ಕೇರಳದ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಈ ಬಾರಿ ಅವರ ಸಂಖ್ಯೆಯೂ ಕಡಿಮೆಯಾಗಿದೆ.

ಪ್ರವಾಸಿಗರಿಗೆ ಸ್ಮರಣಿಕೆ: ಈ ಬಾರಿ ಜಿಲ್ಲಾಡಳಿತ ಪ್ರವಾಸಿಗರಿಗೆ ಸ್ಮರಣಿಕೆ ನೀಡುವ ಯೋಜನೆ ಹಾಕಿಕೊಂಡಿದೆ. ಸ್ಮರಣಿಕೆಗಳ ಮೇಲೆ ಮೈಸೂರು ದಸರಾ-2016 ಲೋಗೋ ಇರಲಿದೆ.

ಆಕಾಶ ಅಂಬಾರಿ ವಿಮಾನ: ಮೈಸೂರು ಮತ್ತು ಬೆಂಗಳೂರು ನಡುವೆ ‘ಆಕಾಶ ಅಂಬಾರಿ’ ಎಂಬ ಹೊಸ ಸಂಪರ್ಕ ಆರಂಭಿಸಲು ಯೋಜಿಸಲಾಗಿದೆ. ಈ ವಿಮಾನವು 8 ಮಂಡಿ ಯಾತ್ರಿಗಳನ್ನು ಹೊತ್ತೊಯ್ಯಲಿದೆ. 4 ಸಾವಿರ ರು. ದರ ನಿಗದಿಯಾಗಿದ್ದು, ಅಕ್ಟೋಬರ್ 1ರಿಂದ 15 ದಿನಗಳವರೆಗೆ ವಿಮಾನ ಹಾರಾಟ ನಡೆಸಲಿದೆ.

“ಬೆಂಗಳೂರಿನಿಂದ ಮೈಸೂರಿಗೆ 2 ವಿಮಾನಗಳು ಹಾರಾಟ ನಡೆಸಲಿದೆ. ಪ್ರವಾಸೋದ್ಯಮವು ‘ಆಕಾಶ ಅಂಬಾರಿ’ಯನ್ನು ಯೋಜಿಸಿದ್ದು, ಆಸಕ್ತರು ಆನ್‍ಲೈನ್‍ನಲ್ಲಿ ಸೀಟ್‍ಗಳನ್ನು ಬುಕ್‍ ಮಾಡಿಕೊಳ್ಳಬಹುದು. ಅ.1ರಂದು ‘ಗೋಲ್ಡನ್‍ ಚಾರಿಯಟ್’ ಕೂಡ ಮೈಸೂರಿಗೆ ಆಗಮಿಸಲಿದೆ’’ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವೈಫೈ ಹಾಟ್‍ಸ್ಪಾಟ್‍: ಪ್ರವಾಸಿಗರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಉದ್ದೇಶದಿಂದ ವೈಫೈ ಹಾಟ್‍ಸ್ಪಾಟ್‍ಗಳನ್ನು ಆರಂಭಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಯೋಜನೆಯಂತೆ ನಡೆದಲ್ಲಿ ಈ ವರ್ಷದ ದಸರಾದಲ್ಲಿ ಹಲವೆಡೆ ವೈಫೈ ವಲಯಗಳು ಇರಲಿವೆ ಎಂದು ಉಪ ಆಯುಕ್ತ ಡಿ.ರಣ್‍ದೀಪ್ ತಿಳಿಸಿದ್ದಾರೆ.

Leave a Reply

comments

Tags

Related Articles

error: