ಮನರಂಜನೆಮೈಸೂರು

ಸರಸ್ವತಿ ಎಲ್ಲರಿಗೂ ಒಲಿಯಲ್ಲ, ಸುಹಾನ ಸಂಗೀತದಲ್ಲಿ ಮುಂದುವರಿಯುತ್ತಾರೆ : ಕಿಚ್ಚ ಸುದೀಪ್

ಸುಹಾನ ಅಂದ್ರೆ ನಮ್ಮ ಹೆಮ್ಮೆ. ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ. ಸುಹಾನ ಅವರು ಜೀವನದಲ್ಲಿ ಚೆನ್ನಾಗಿ ಇರುತ್ತಾರೆ. ಸಂಗೀತ ಕಾರ್ಯಕ್ರಮದಲ್ಲಿ ಅವರು ಮುಂದುವರಿಯುತ್ತಾರೆ  ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಶುಕ್ರವಾರ ಹೆಬ್ಬುಲಿ ಚಿತ್ರದ ಯಶಸ್ಸನ್ನು ಆಚರಿಸಲು ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಸುದೀಪ್ ಆಗಮಿಸಿದ್ದರು. ಚಿತ್ರದ ಯಶಸ್ಸಿನ ಕುರಿತು ಹೆಮ್ಮೆ ಇದೆ. ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡಬ್ಬಿಂಗ್ ಹೋರಾಟದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸುದೀಪ್, ನಮಗೆ ತಂದೆ-ತಾಯಿ ಅಂದರೆ ತುಂಬಾ ಪ್ರೀತಿ. ಪ್ರಪಂಚದ ಯಾವುದೇ ಭಾಗದಲ್ಲೇ ಇದ್ದರೂ ಅವರಿಗೆ ಕರೆ ಮಾಡಿ ಮಾತನಾಡುತ್ತೇವೆ. ದಿಢೀರ್ ಅಂತಾ ಹೋರಾಟ ಹಮ್ಮಿಕೊಂಡಿರುವುದರಿಂದ ಭಾಗಿಯಾಗಲು ಆಗಲಿಲ್ಲ. ಆದರೆ ನಾವು ಚಿತ್ರರಂಗ ಬಿಟ್ಟುಕೊಡ್ತೀವಾ? ನಾವು ಎಲ್ಲೆ ಇದ್ದರೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇನ್ನು ದರ್ಶನ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಸುದೀಪ್ ಕೈ ಮುಗಿದು ಮುಂದೆ ಸಾಗಿದರು. ತಮ್ಮ ನೆಚ್ಚಿನ ನಾಯಕ ನಟ ಸುದೀಪ್ ಅವರನ್ನು ನೋಡಲು ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರವನ್ನು ಕೂಡ ನಡೆಸಿದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: