ಮೈಸೂರು

ಸಿಸಿಬಿ ಎಎಸ್ ಐ ಮನೆಯ ಮುಂದೆ ನಿಲ್ಲಿಸಿದ್ದ ಸ್ಕಾರ್ಪಿಯೋ ವಾಹನ ಕಳ್ಳತನ : ಪೊಲೀಸ್ ಇಲಾಖೆ ಕಳ್ಳತನ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗುತ್ತಿದೆಯಾ?

ಮೈಸೂರು,ಜ.28:- ಮೈಸೂರಲ್ಲಿ ಪೊಲೀಸರು ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲವಾ? ಪೊಲೀಸ್ ಇಲಾಖೆ ಕಳ್ಳತನ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಅದಕ್ಕೆ ಕಾರಣವೂ ಇದೆ. ಸಿಸಿಬಿ ಎಎಸ್ ಐ ಅವರ ಮನೆಯ ಮುಂದೆ ನಿಲ್ಲಿಸಲಾದ ಸ್ಕಾರ್ಪಿಯೋ ಕಾರನ್ನು ಯಾರೋ ಕಳ್ಳರು ಕದ್ದೊಯ್ದಿದ್ದು, ಕ್ರೈಂ ಬ್ಯೂರೋ ಅಧೀಕಾರಿಗಳ ಮನೆಯ ಮುಂದೆಯೇ ವಾಹನ ಕಳ್ಳತನವಾದರೆ ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಎನ್ ಆರ್ ಮೊಹಲ್ಲಾ ನಿವಾಸಿಯಾಗಿರುವ ಸಿಸಿಬಿ ಎಎಸ್ ಐ ಅಲೆಕ್ಸ್ ತಮ್ಮ ಮನೆಯ ಮುಂದೆ ಸ್ಕಾರ್ಪಿಯೋ KA05MF 1972 ವಾಹನವನ್ನು ನಿಲ್ಲಿಸಿದ್ದರು, ನಿನ್ನೆ ಬೆಳಿಗ್ಗೆ ಎದ್ದು ನೋಡಿದಾಗ ಕಾರು ಮನೆಯ ಮುಂದೆ ಇರಲಿಲ್ಲ. ರಾತ್ರಿಯೇ ಯಾರೋ ಕಳ್ಳರು ಸ್ಕಾರ್ಪಿಯೋ ಕಾರನ್ನು ಎಗರಿಸಿ ಪರಾರಿಯಾಗಿದ್ದರು.

ಎನ್ ಆರ್ ಪೊಲೀಸ್ ಠಾಣೆಯಲ್ಲಿ ಸ್ಕಾರ್ಪಿಯೋ ವಾಹನ ಕಳ್ಳತನ ಕುರಿತು ದೂರು ದಾಖಲಾಗಿದೆ. ಇದೀಗ ಸಿಸಿಬಿ ಎ ಎಸ್ ಐ ಅವರ ಮನೆಯ ಮುಂದೆ ನಿಲ್ಲಿಸಲಾದ ಸ್ಕಾರ್ಪಿಯೋ ವಾಹನವನ್ನೇ ಕಳ್ಳರು ಕದ್ದೊಯ್ದಿದ್ದಾರೆ ಎಂದರೆ ಜನಸಾಮಾನ್ಯರಿಗೆ ತಮ್ಮ ವಾಹನದ ಪಾಡೇನು ಎಂಬ ಚಿಂತೆ ಆರಂಭವಾಗಿದೆ. ಮೈಸೂರಿನಲ್ಲಿ ಮತ್ತೆ ಮನೆಗಳ್ಳತನ, ಸರಗಳ್ಳತನ, ಗ,ಮನ ಬೇರೆಡೆ ಸೆಳೆದು ಹಣ ಲೂಟಿ ಮಾಡುವುದು, ಚಿನ್ನ ಎಗರಿಸುವುದು ನಡೆಯುತ್ತಲೇ ಇದೆ. ದೂರು ನೀಡಿದರೆ ಇಂತಹ ವಂಚನೆ ಮಾಡುವವರನ್ನು ಪೊಲೀಸರು ಕಂಡು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ನಿಜವಾಗಿಯೂ ಮೈಸೂರಿನಲ್ಲಿ ಪೊಲೀಸ್ ಇಲಾಖೆ ಜಡ್ಡುಗಟ್ಟಿದೆಯಾ? ಈ ರೀತಿ ಆದಲ್ಲಿ ನಮಗೆ ರಕ್ಷಣೆ ನೀಡೋರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: