
ಮೈಸೂರು
ಪಾಲಿಕೆಯ 18 ನೇ ವಾರ್ಡ್ ಉಪಚುನಾವಣೆ ಹಿನ್ನೆಲೆ : ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಪ್ರಕಾಶ್ ನಾಮಪತ್ರ ಸಲ್ಲಿಕೆ
ಮೈಸೂರು,ಜ.28:- ಮೈಸೂರು ಮಹಾನಗರ ಪಾಲಿಕೆಯ 18 ನೇ ವಾರ್ಡ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಪ್ರಕಾಶ್ ಇಂದು ನಾಮಪತ್ರ ಸಲ್ಲಿಸಿದರು.
ಒಂಟಿಕೊಪ್ಪಲಿನ ವಲಯಾಧಿಕಾರಿಗಳ ಕಛೇರಿ 4 ರಲ್ಲಿ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದರು. ಚುನಾವಣಧಿಕಾರಿ ಶಿವೇಗೌಡರಿಗೆ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರೊಂದಿಗೆ ವಲಯ ಕಛೇರಿಗೆ ಆಗಮಿಸಿದ್ದರು.
ಏತನ್ಮಧ್ಯೆ ಪಾಲಿಕೆ 18 ನೇ ವಾರ್ಡ್ ನ ಉಪ ಚುನಾವಣಾ ಕಣ ರಂಗೇರಿದ್ದು, 18 ನೇ ವಾರ್ಡ್ ನಉಪ ಚುನಾವಣಾ ಅಖಾಡಕ್ಕೆ ಮೇಯರ್ ತಸ್ನೀಂ ಎಂಟ್ರಿ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಮೇಯರ್ ತಸ್ನೀಂ ಸಾಥ್ ನೀಡಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಗೆ ಜೆಡಿಎಸ್ ಮೇಯರ್ ಸ್ಥಾನ ನೀಡಿತ್ತು. ಮೇಯರ್ ಆದ ಬಳಿಕ ಮೊದಲ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ ಮೇಯರ್ ತಸ್ನೀಂ ಜೆಡಿಎಸ್ ಅಭ್ಯರ್ಥಿ ಗೆ ಸಾಥ್ ನೀಡಿದ್ದಾರೆ. ತೆನೆ ಅಭ್ಯರ್ಥಿಗೆ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಪಾಲಿಕೆ ಸದಸ್ಯೆ ನಿರ್ಮಲ ಹರೀಶ್, ಲಿಂಗಾರಾಜು,ಸಾಥ್ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)