ಮನರಂಜನೆಮೈಸೂರು

ಶ್ರೀ ಮಾಯಕಾರ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣಗೊಂಡ ‘ಡಿಂಗ’ ಚಿತ್ರ ಜ.31ರಂದು ತೆರೆಗೆ

ಮೈಸೂರು,ಜ.28:- ಶ್ರೀ ಮಾಯಕಾರ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣಗೊಂಡ ‘ಡಿಂಗ’ ಚಿತ್ರವು ಜ.31ರಂದು ಸುಮಾರು 75ರಿಂದ 100 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ನಿರ್ಮಾಪಕರಲ್ಲೊಬ್ಬರಾದ ಮೂಗೂರು ಮಧುದೀಕ್ಷಿತ್ ಮಾಹಿತಿ ನೀಡಿ ಶ್ರೀ ಮಾಯಕಾರ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಮೊದಲ ಬಾರಿಗೆ ಅಭಿಷೇಕ್ ಜೈನ್ ನಿರ್ದೇಶನದ ಕಿರುತೆರೆ ನಟರಾದ ಆರ್ವಗೌಡ್ರು, ಅನುಷಾ  ನಾಯಕ ನಾಯಕಿಯಾಗಿ ನಟಿಸಿರುವ ‘ಡಿಂಗ ಬಿ ಪಾಸಿಟಿವ್’ ಸಿನಿಮಾ ಜ.31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದರು.

ದೇಶದಲ್ಲೇ ಪ್ರಥಮ ಬಾರಿಗೆ ಪೂರ್ಣ ಸಿನಿಮಾವನ್ನು ಪೊನೊಗ್ರಫಿ ಟೆಕ್ನಾಲಜಿಯಿಂದ ಚಿತ್ರೀಕರಿಸಲಾಗಿದೆ. ಶುದ್ಧೋರಾಯ್ ಸಂಗೀತ ನಿರ್ದೇಶನವಿದ್ದು, ಶ್ರೀಕಾಂತ ಸಂಕಲನ, ವಿಜಯ್ ಈಶ್ವರ್, ಕಾಂತ ಕನ್ನಾಲೆ ಸಾಹಿತ್ಯ,  ರಾಮನಾಥ್ ಗುಪ್ತ, ಸಿ.ಜಗದೀಶ್, ಜ್ಞಾನೇಶ್ವರಿ ಸುರೇಶ್, ಶಿವಪ್ರಕಾಶ್, ಎನ್.ಸುಜನಾ ಆನಂದ್, ಚಂದ್ರಕಲಾ ಮೋಹನ್ ಕುಮಾರ್, ಪ್ರದೀಪ್ , ಜಿ.ಕಿಶೋರ್ ಕುಮಾರ್, ಸುರೇಶ್ ಹೆಚ್.ವಿ, ಜೆ.ಇ.ಶಿವಕುಮಾರ್ ನಿರ್ಮಾಪಕತ್ವದಲ್ಲಿ ಮೂಡಿ ಬಂದಿದೆ. ಚಿತ್ರದ ಟೈಟಲ್ ಟ್ರ್ಯಾಕ್ ನ್ನು ಅರ್ಜುನ್ ಜನ್ಯ ನಿರ್ದೇಶನದಲ್ಲಿ ಗಾಯಕರಾದ ಸಂಜಿತ್ ಹೆಗಡೆ, ಅನುರಾದ ಭಟ್, ನವೀನ್ ಸಜ್ಜು ಹಾಡಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ಆರ್ವಗೌಡ್ರು, ನಾಯಕಿ ಅನುಷಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: