ಮೈಸೂರು

ರಾಷ್ಟ್ರಪತಿ ಪದಕಕ್ಕೆ ಎಆರ್ ಎಸ್ಐ ರಾಜಕುಮಾರ ಆಯ್ಕೆ

ಮೈಸೂರು,ಜ.28-ಗಣರಾಜೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಶಸ್ತ್ರ ಸಬ್ ಇನ್ ಸ್ಪೆಕ್ಟರ್ (ಎಆರ್ ಎಸ್ಐ) ರಾಜಕುಮಾರ ಆಯ್ಕೆಯಾಗಿದ್ದಾರೆ.

ರಾಜ್ಯದ 19 ಪೊಲೀಸ್ ಅಧಿಕಾರಿಗಳು ಈ ಪದಕ ಪಡೆದಿದ್ದಾರೆ. ಕಳೆದ 30 ವರ್ಷಗಳಲ್ಲಿ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಅಧಿಕೃತವಾಗಿ ಸಶಸ್ತ್ರ ತರಬೇತಿ ನೀಡುವ ಏಕೈಕ ಅಧಿಕಾರಿ ಎನಿಸಿದ್ದಾರೆ. ಇವರ ಜತೆಗೆ, ತಲಾ ಒಬ್ಬರು ಹೆಡ್ ಕಾನ್ ಸ್ಟೇಬಲ್ ಹಾಗೂ ಕಾನ್ ಸ್ಟೇಬಲ್ ಇದ್ದಾರೆ. ಇವರು ಪೊಲೀಸ್ ವರಿಷ್ಠಾಧಿಕಾರಿ ಅವರು ಸೂಚಿಸುವ ವ್ಯಕ್ತಿಗಳಿಗೆ ಸಶಸ್ತ್ರ ತರಬೇತಿ ನೀಡುವರು. ಇವರಿಂದ ಅರಣ್ಯ ರಕ್ಷಕ ದಳ ಸೇರಿದಂತೆ ಸರ್ಕಾರಿ ಸಂಸ್ಥೆಗಳವರು ತರಬೇತಿ ಪಡೆದಿದ್ದಾರೆ.

ಪ್ರಶಸ್ತಿಯಿಂದ ತುಂಬಾ ಖುಷಿಯಾಗಿದೆ. ಇನ್ನಷ್ಟು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ದೊರೆತಿದೆ ಎಂದು ರಾಜಕುಮಾರ ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: