ಮೈಸೂರು

ವರದಕ್ಷಿಣೆಗಾಗಿ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಲೆಗೈದ ಪತಿ

ವರದಕ್ಷಿಣೆ ತರುವಂತೆ ಪೀಡಿಸಿ, ಪತ್ನಿ ವರದಕ್ಷಿಣೆ ತರದೇ ಇರುವುದರಿಂದ ಆಕೆಗೆ ಪತಿಯೇ ಬೆಂಕಿ ಹಚ್ಚಿ ಕೊಲೆಗೈದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಮೃತಳನ್ನು ಬಿಳಿಗೆರೆ ಗ್ರಾಮದ ನಿವಾಸಿ ರತ್ನಮ್ಮ(24) ಎಂದು ಗುರುತಿಸಲಾಗಿದೆ.ಆಕೆಯ ಪತಿ ರವಿಗೆ ರತ್ನಮ್ಮ ಎರಡನೇ ಪತ್ನಿಯಾಗಿದ್ದಳು. ಮೊದಲನೇ ಪತ್ನಿ ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೇ ತವರು ಮನೆ ಸೇರಿದ್ದಳು ಎನ್ನಲಾಗಿದೆ. ಇದರಿಂದ ಕಳೆದ ವರ್ಷ ರವಿ ಬಾಣೂರು ಗ್ರಾಮದ ರತ್ನಮ್ಮ ಎಂಬವರನ್ನು ಮದುವೆಯಾಗಿದ್ದ. ಇದೀಗ ಈಕೆಗೂ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಬೆಂಕಿ ಹಚ್ಚಿ ಕೊಲೆಗೈದಿದ್ದಾನೆ. ರವಿ ಹಾಗೂ ಆತನ ತಾಯಿ ಪರಾರಿಯಾಗಿದ್ದಾರೆ. 

ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: