
ಮೈಸೂರು
ನಂಜನಗೂಡಿನ ಶ್ರೀಕಂಠೇಶ್ವರ ಹುಂಡಿಯಲ್ಲಿ ರದ್ದಾದ ನೋಟುಗಳು
ಮೈಸೂರು,(ನಂಜನಗೂಡು)ಜ.29-ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಹುಂಡಿಗಳಲ್ಲಿ, ಮೂರು ವರ್ಷದ ಹಿಂದೆ ಅಮಾನ್ಯೀಕರಣಗೊಂಡ 1,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಕಂಡು ಬಂದಿವೆ.
ನಿನ್ನೆ ದೇವಸ್ಥಾನದ ಹುಂಡಿಗಳನ್ನು ತೆರೆದು ಎಣಿಕೆ ನಡೆಸಲಾಗಿದ್ದು, ರದ್ದಾದ 1,000 ರೂ. ಮುಖಬೆಲೆಯ 1,008 ನೋಟುಗಳು, 500 ರೂ. ಮುಖಬೆಲೆಯ 55 ನೋಟುಗಳು ಪತ್ತೆಯಾಗಿವೆ.
ಉಳಿದಂತೆ 83,12,484 ರೂ. ನಗದು, 54 ಗ್ರಾಂ ಚಿನ್ನ, 1 ಕೆಜಿ 400 ಗ್ರಾಂ ಬೆಳ್ಳಿ ಹಾಗೂ 15 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿದ್ದವು. 18 ಹುಂಡಿಗಳ ಹಣವನ್ನು ಎಣಿಕೆ ಮಾಡಲಾಗಿದ್ದು, ಇದು 20 ದಿನಗಳ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ತಿಳಿಸಿದ್ದಾರೆ. (ಕೆ.ಎಸ್, ಎಂ.ಎನ್)