ಮೈಸೂರು

ಹುಲ್ಲಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಮೈಸೂರು,(ಮಲ್ಕುಂಡಿ),ಜ.29- ಹುಲ್ಲಹಳ್ಳಿ ಗ್ರಾಮದಿಂದ ಕುರಿಹುಂಡಿ ಗ್ರಾಮಕ್ಕೆ ತೆರಳುವ ರಸ್ತೆ ಬಳಿಯ ಜಮೀನೊಂದರಲ್ಲಿ ವ್ಯಕ್ತಿಯೊಬ್ಬನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹುಲ್ಲಹಳ್ಳಿ ಗ್ರಾಮದ ನಿವಾಸಿ ಪ್ರಕಾಶ್ (40) ಕೊಲೆಯಾದ ದುರ್ದೈವಿ. ಈತ ಮೈಸೂರಿನ ಆರ್ ಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲಸಕ್ಕಾಗಿ ಭಾನುವಾರ ಮನೆಯಿಂದ ಹೋದವನು ಸೋಮವಾರ ರಾತ್ರಿ ಕೊಲೆಯಾಗಿದ್ದಾನೆ.

ಹುಲ್ಲಹಳ್ಳಿಯಿಂದ ಕುರಿಹುಂಡಿಗೆ ಹೋಗುವ ರಸ್ತೆ ಬಳಿ ಜಮೀನೊಂದರಲ್ಲಿ ದುಷ್ಕರ್ಮಿಗಳು ಈತನ ಮುಖಕ್ಕೆ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ ಪಿ ಸಿ.ಬಿ.ರಿಷ್ಯಂತ್, ಡಿವೈಎಸ್ ಪಿ ಪ್ರಭಾಕರ್ ರಾವ್ ಶಿಂಧೆ, ಪಿಎಸ್ಐ ಬಿ.ಸುರೇಂದ್ರ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: