ಮೈಸೂರು

ಫೆ.2 ರಂದು ಸಿಎಎ, ಎನ್ಆರ್ ಸಿ ವಿರುದ್ಧ ಬೃಹತ್ ವಿಚಾರ ಸಂಕಿರಣ: ಎಚ್.ಸಿ.ಮಹದೇವಪ್ಪ

ಮೈಸೂರು,ಜ.30-ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಬೃಹತ್ ವಿಚಾರ ಸಂಕಿರಣವನ್ನು ಫೆಬ್ರವರಿ 2 ರಂದು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2 ರಂದು ಕಾಂಗ್ರೆಸ್ ಭವನದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಸಂವಿಧಾನ ಉಳಿಸಿ ಬೆಳೆಸುವ ಕೆಲಸಕ್ಕೆ ಅಂದು ಚಾಲನೆ ಸಿಗಲಿದೆ ಎಂದರು.

ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಈ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ಈ ಕಾಯ್ದೆ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದರ ವಿರುದ್ಧ ಧ್ವನಿ ಎತ್ತಲು ದೇಶದ ನಾನಾ ಭಾಗಗಳಿಂದ ಚಿಂತಕರು, ಪ್ರಮುಖ ಮುಖಂಡರ ಆಗಮಿಸುತ್ತಿದ್ದಾರೆ. ಈ ಕಾಯ್ದೆ ಒಪ್ಪಿಕೊಳ್ಳಿ ಅಂತ ಬಿಜೆಪಿ ಸಭೆಗಳನ್ನ ಮಾಡುತ್ತಿದೆ. ಇದು ಸಂವಿಧಾನ ವಿರೋಧವಾಗಿದೆ. ಸ್ಪಷ್ಟವಾಗಿ ಈ ಕಾಯ್ದೆಯ ಮೂಲಕ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಕೆಪಿಸಿಸಿ ಹುದ್ದೆ ಸದ್ಯಕ್ಕೆ ಖಾಲಿಯಿಲ್ಲ. ನಾನು ಕೆಪಿಸಿಸಿ ಹುದ್ದೆಯ ರೇಸ್ ನಲ್ಲಿ ಇಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಇದ್ದಾರೆ. ಪಕ್ಷ ಎಲ್ಲ ವಿಚಾರಗಳನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಸದ್ಯಕ್ಕೆ ನಮ್ಮ ಮುಂದೆ ಇರೋದು ಪೌರತ್ವ ಕಾಯ್ದೆ ವಿರೋಧಿ ಹೋರಾಟ ಮಾತ್ರ. ನಮ್ಮ ಗಮನ ಅದರ ಮೇಲಿದೆ ಎಂದಿದ್ದಾರೆ.

ಬಿಜೆಪಿ ಅವರೇನು ದೇಶದ ಮೂಲ ನಿವಾಸಿಗಳಿಗೆ ಪೌರತ್ವ ಕೋಡೋದು. ಅವರು ಇಲ್ಲಿಯವರೇ ಅವರಿಗೆ ಪೌರತ್ವ ಹೇಗೆ ಕೋಡ್ತಾರೆ. ಸುಖಾ ಸುಮ್ಮನೆ ಕಾಯ್ದೆ ಏರಲು ಈ ರೀತಿ ಮಾತಾಡುತ್ತಿದ್ದಾರೆ. ವಾಕ್ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ನಮ್ಮನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಮಹದೇವಪ್ಪ ಅವರು, ಇದ್ಯಾವುದಕ್ಕು ನಾವು ಹೆದರೋಲ್ಲ. ಕೋರ್ಟ್‌ನಲ್ಲೂ ಸಿಎಎ ಕಾಯ್ದೆ ಜಾರಿಗೆ ಬಂದರೂ ಸ್ವತಃ ಗಾಂಧಿಜೀ ಹೇಳಿದ್ದಂತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ  ಡಾ.ಬಿ.ಜೆ.ವಿಜಯಕುಮಾರ್, ಎಂ.ಲಕ್ಷ್ಮಣ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: