ಮೈಸೂರು

`ಗಾಂಧಿಯ ಹಂತಕರು ದೇಶದ ಹಂತಕರು’ ಎಸ್ ಡಿಪಿಐ ನಿಂದ ಪ್ರತಿಭಟನೆ

ಮೈಸೂರು,ಜ.30-`ಗಾಂಧಿಯ ಹಂತಕರು ದೇಶದ ಹಂತಕರು’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇಂದು ನಗರದ ಗಾಂಧಿವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನದಂದು ಕೆಲವರು ಗಾಂಧಿಯನ್ನು ಕೊಂಡ ಗೋಡ್ಸೆಯನ್ನು ಆರಾಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಮಹಾಸಭಾದಂತಹ ಗುಂಪುಗಳು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳದೆ ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

ಅಂದು ಗೋಡ್ಸೆ ಗಾಂಧೀಜಿಯನ್ನು ಕೊಂದರೆ ಇಂದು ಆತನ ಅನುಯಾಯಿಗಳು ರಾಷ್ಟ್ರವನ್ನು ಪ್ರತಿನಿತ್ಯ ಕೊಲ್ಲುತ್ತಿದ್ದಾರೆ ಎಂದು ಕಿಡಿಕಾರಿದ ಪ್ರತಿಭಟನಕಾರರು ನಾವೆಲ್ಲರೂ ಒಂದಾಗಿ ಗಾಂಧೀಜಿಯವರ ಆದರ್ಶ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಗೋಡ್ಸೆ ಅನುಯಾಯಿಗಳ ಕಪಿಮುಷ್ಠಿಯಿಂದ ರಾಷ್ಟ್ರವನ್ನು ರಕ್ಷಿಸಲು ಮುಂದಾಗಬೇಕು ಎಂದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: