ಮೈಸೂರು

ಮಡಿಕೇರಿಯಲ್ಲಿ ನಡೆಯುತ್ತಿದೆ ಕಾಡಾನೆಗಳನ್ನು ಪಳಗಿಸುವ ಕಾರ್ಯ

ಮಡಿಕೇರಿ: ಮಂಜಿನ ನಗರಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವ ಕಾರ್ಯ ನಡೆಯುತ್ತಿದೆ.

ದುಬಾರೆ ಆನೆ ಶಿಬಿರದ ಪ್ರತ್ಯೇಕ ಕ್ರಾಲ್‍ಗಳಲ್ಲಿ ಪುಂಡಾನೆಗಳನ್ನು ಕೂಡಿಟ್ಟು ತರಬೇತಿ ನೀಡಲಾಗುತ್ತಿದ್ದು, ಮಾವುತರು ನಿತ್ಯವೂ ಈ ಆನೆಗಳಿಗೆ ಪಾಠವನ್ನು ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಸಿದ್ದಾಪುರ, ಪಾಲಿಬೆಟ್ಟ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ನಾಲ್ಕು ಪುಂಡಾನೆಗಳನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಸದ್ಯ ಈ ಪುಂಡಾನೆಗಳಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿನಿತ್ಯ ಹುಲ್ಲು, ಭತ್ತ, ಕಾಡು ಸೊಪ್ಪು ಕೊಟ್ಟು ಕಾಡಾನೆಗಳ ಆರ್ಭಟವನ್ನು ತಣ್ಣಗಾಗಿಸಲು ಪ್ರಯತ್ನಿಸಲಾಗುತ್ತಿದೆ. ಸೆರೆಹಿಡಿದ ಆನೆಗಳನ್ನು ಕ್ರಾಲ್‍ಗಳಲ್ಲಿ ಬಂಧಿಸಿಡಲಾಗಿದೆ. ಮೊದಲು ಮಾವುತರು ಆನೆಗಳ ಸ್ವಭಾವ ಅರಿತು ಹಂತ ಹಂತವಾಗಿ ತರಬೇತಿ ನೀಡುತ್ತಾರೆ. ಕನಿಷ್ಠ ಮೂರು ತಿಂಗಳ ತರಬೇತಿ ನಂತರ ಕಾಡಾನೆಗಳ ಆರ್ಭಟವನ್ನು ತಣ್ಣಗಾಗಿಸಲಾಗುತ್ತದೆ. ಸಾಕಾನೆಗಳನ್ನು ಬಂಧಿಯಾದ ಕಾಡಾನೆಗಳ ಬಳಿ ಕರೆತಂದು ಮೃದುವಾಗಿಸಲಾಗುತ್ತದೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕೊಂದು ಅತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳು ಇದೀಗ ಬಂಧಿಯಾಗಿವೆ. ಆದರೆ ಆನೆ, ಮಾನವ ಸಂಘರ್ಷ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಇದಕ್ಕೆ ಶಾಶ್ವತವಾಗಿ ಮುಕ್ತಿ ನೀಡಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: