ಪ್ರಮುಖ ಸುದ್ದಿಮೈಸೂರು

ಬೇಗ ಸಚಿವ ಸಂಪುಟ ವಿಸ್ತರಿಸಿ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಜ.30- ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ ಒಳ್ಳೆಯ ಆಡಳಿತ ಕೊಡಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ದೆಹಲಿಗೆ ತೆರಳಿದ್ದು, ಪಕ್ಷ ಬಿಟ್ಟು ಬಂದ ಶಾಸಕರು ಇನ್ನೆಷ್ಟು ದಿನ ಕಾಯ್ತಾರೇ.? 17 ಜನರ ತಾಳ್ಮೆ ಪರೀಕ್ಷಿಸಬಾರದು. ನಮ್ಮ ಪಕ್ಷಕ್ಕೆ ಬಂದು ಸರ್ಕಾರ ರಚನೆಗೆ ಕಾರಣ ಆಗಿದ್ದಾರೆ. ಅವರಿಗೆ ಸ್ಥಾನಮಾನ ‌ಕೊಡೋದು ಪಕ್ಷದ ಜವಬ್ದಾರಿ ಎಂದರು.

ಪಕ್ಷಾಂತರಿ ಶಾಸಕರ ಜೊತೆ ಮಾತನಾಡಿರೋದು, ಭರವಸೆ ಕೊಟ್ಟಿರೋದು ಸಿಎಂ ಬಿಎಸ್ ವೈ, ಏ‌ನು ವಾಗ್ದಾನ ಕೊಟ್ಟಿದ್ದಾರೊ ಯಡಿಯೂರಪ್ಪಗೆ ಗೊತ್ತು. ಹಾಗಾಗಿ ಸಿಎಂ ಹೈಕಮಾಂಡ್ ಜೊತೆ ಮಾತನಾಡಲಿ. ಅವರು ಕೊಟ್ಟ ಭರವಸೆ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಲಿ ಎಂದು ತಿಳಿಸಿದರು.

ಯಾರ್ಯಾರಿಗೆ ಯಾವ ರೀತಿ ಮಾತು ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಆಗಲಿ‌ ಇನ್ನೊಬ್ಬರ ಬಗ್ಗೆ ನಾನು ಮಾತನಾಡೋಲ್ಲ. ಬಂದ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಸಂಪುಟ ವಿಸ್ತರಣೆ ತಡ ಆದರೆ ಏನೂ ಆಗೋಲ್ಲ. ಆ ಬಗ್ಗೆ ಇನ್ನೇನು ಹೇಳೋದಿಲ್ಲ‌. ಸರ್ಕಾರಕ್ಕೂ ಯಾವುದೇ ತೊಂದರೆ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ಮೂಲಕ ತೀರ್ಮಾನಕ್ಕೆ ಬರುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: