ಪ್ರಮುಖ ಸುದ್ದಿ

 ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆ ಪ್ರತಿಷ್ಠಾಪನೆ 

ರಾಜ್ಯ(ಮಂಗಳೂರು )ಜ.31:-  ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವ ಪ್ರಯುಕ್ತ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು   ದೇವಳಕ್ಕೆ ಆಗಮಿಸಿದರು.

ಶ್ರೀಗಳವರಿಗೆ ಮಂಗಳೂರು ಸಮಾಜ ಭಾಂದವರ ಪರವಾಗಿ ಭವ್ಯ ಸ್ವಾಗತ ನೀಡಲಾಯಿತು . ಬಳಿಕ ಶ್ರೀಗಳವರು ದೇವ ದರ್ಶನ ಪಡೆದರು. ನೂತನವಾಗಿ ನಿರ್ಮಿಸಲಾದ ಸ್ವರ್ಣ ಖಚಿತ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕೆ ಯನ್ನು ಶ್ರೀದೇವಳದ ಪ್ರಕಾರದಲ್ಲಿ ಶ್ರೀಗಳವರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟಿತು , ನಾಳೆ   ಬ್ರಹ್ಮ ರಥೋತ್ಸವ ಹಾಗೂ ಆದಿತ್ಯವಾರದಂದು ಅವಭ್ರತ ಮಹೋತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಪಂಡಿತ್ ನರಸಿಂಹ ಆಚಾರ್ಯ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: