ಮೈಸೂರು

ಮುಂಬೈನಲ್ಲಿ  ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ‘ಕಂಚುಗನ್ನಡಿ’ ನಾಟಕ ಪ್ರದರ್ಶನ

ಮೈಸೂರು,ಜ.31:-  ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ‘ಕಂಚುಗನ್ನಡಿ’ ಎಂಬ ನಾಟಕ ನಿನ್ನೆ ಮುಂಬೈನಲ್ಲಿ  ಪ್ರದರ್ಶನಗೊಂಡಿತು.

ಮೈಸೂರು ಅಸೋಸಿಯೇಷನ್ ಮುಂಬೈ ಮತ್ತು ಆಧ್ಯ ರಂಗಾಚಾರ್ಯ ಫೌಂಡೇಷನ್ ಅವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ 3 ದಿನಗಳ ಶ್ರೀರಂಗೋತ್ಸವವನ್ನು ಮೈಸೂರು ಅಸೋಸಿಯೇಷನ್ ಸಭಾಗೃಹ ಮಾತುಂಗ (ಪೂರ್ವ ಮುಂಬೈ)ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ನಾಟಕೋತ್ಸವದ ಕೊನೆಯ ದಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ ರಂಗ ತಂಡದಿಂದ  ಉಷಾ ನರಸಿಂಹನ್ ರಚನೆಯ   ವಿಕ್ರಮ್ ಜಿ.ಟಿ. ಮತ್ತು   ಚಾಂದಿನಿ ಪಿ ಅವರು ನಿರ್ದೇಶಿಸಿದ ‘ಕಂಚುಗನ್ನಡಿ’ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: