ಮೈಸೂರು

ಕವನಗಳಲ್ಲಿ ವಸ್ತು,ವೈವಿಧ್ಯತೆ ಕೊರತೆ ಕಾಡುತ್ತಿದೆ : ಧರಣಿದೇವಿ ಮಾಲಗತ್ತಿ ಬೇಸರ

ಕವಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಕವನಗಳಲ್ಲಿ ವಸ್ತು ವೈವಿಧ್ಯದ ಕೊರತೆ ಕಾಡುತ್ತಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಧರಣಿದೇವಿ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಲಾದ ಯುವ ಕವಿಗೋಷ್ಠಿಯನ್ನು ಧರಣಿದೇವಿ ಮಾಲಗತ್ತಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕವಿಗಳು ಹೇಳುವ ಕವಿತೆಯಲ್ಲಿ ಸಾಮಾಜಿಕ ಜವಾಬ್ದಾರಿ ಇರಬೇಕು. ಕವಿಯಾದವನು  ತನ್ನ ಲೇಖನಿಯಿಂದ ಸಮಾಜದಲ್ಲಿ ದೊಡ್ಡ ಬದಲಾವಣೆ ತಂದರೆ ಅದಕ್ಕಿಂತ ಸಾಧನೆ ಬೇರೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅನೇಕ ಕವಿಗಳು ಕವನ ವಾಚಿಸಿದರು. ರಂಗಕರ್ಮಿ ಬಿ.ಎಂ.ರಾಮಚಂದ್ರ, ಸಾಹಿತಿ ಮಂಜುನಾಥ, ಲತಾ, ಟಿ.ಗುರುರಾಜು ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: