ಕ್ರೀಡೆ

ಭಾರತ ಮತ್ತು ನ್ಯೂಜಿಲೆಂಡ್ ಟಿ 20 ಅಂತರರಾಷ್ಟ್ರೀಯ ಸರಣಿ : ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ

ವಿದೇಶ(ವೆಲ್ಲಿಂಗ್ಟನ್)ಜ.31:- ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಯನ್ನು ಆಡಲಾಗುತ್ತಿದೆ. ಸರಣಿಯ ನಾಲ್ಕನೇ ಟಿ 20 ಅಂತರರಾಷ್ಟ್ರೀಯ ಪಂದ್ಯವನ್ನು ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಭಾರತದ ವಿರುದ್ಧ ಬೌಲಿಂಗ್ ಮಾಡಲು ನಿರ್ಧರಿಸಿದೆ.

ಭುಜದ ಗಾಯದಿಂದಾಗಿ ಕೇನ್ ವಿಲಿಯಮ್ಸನ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಬದಲಿಗೆ ಕಿವಿ ತಂಡದಲ್ಲಿ ಟಾಮ್ ಬ್ರೂಸ್ ಹೆಸರಿಸಲ್ಪಟ್ಟಿದ್ದರೆ, ಕೇನ್ ವಿಲಿಯಮ್ಸನ್ ಬದಲಿಗೆ ಡ್ಯಾರೆಲ್ ಮಿಚೆಲ್ ಆಡುವ ಹನ್ನೊಂದರ  ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ  ಮೂರು ಚಕಿತಗೊಳಿಸುವ ಬದಲಾವಣೆಗಳನ್ನು ಕಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ವಿಶ್ರಾಂತಿ ಪಡೆದಿದ್ದಾರೆ. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಸೇರಿದ್ದಾರೆ.

ಭಾರತದ ಪ್ಲೇಯಿಂಗ್ ಇಲೆವೆನ್: ಸಂಜು ಸ್ಯಾಮ್ಸನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ.

ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಟಾಮ್ ಬ್ರೂಸ್, ಟಿಮ್ ಸೀಫರ್ಟ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗೆಲ್ಗಿನ್, ಟಿಮ್ ಸೌಥಿ (ಕ್ಯಾಪ್ಟನ್), ಇಶ್ ಸೋಧಿ, ಹಮೀಶ್ ಬೆನೆಟ್, ಡ್ಯಾರೆಲ್ ಮಿಚೆಲ್.

ಭಾರತ ಈಗಾಗಲೇ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಸೂಪರ್ ಓವರ್‌ನಲ್ಲಿ ಭಾರತ ಜಯಗಳಿಸಿದ ಸರಣಿಯ ಮೂರನೇ ಪಂದ್ಯವನ್ನು ಬುಧವಾರ (ಜನವರಿ 29) ಆಡಲಾಯಿತು. ಭಾರತವು ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಟಿ 20 ಅಂತರರಾಷ್ಟ್ರೀಯ ಸರಣಿಯನ್ನು ತನ್ನ ಹೆಸರಿಗೆ ದಾಖಲಿಸಿದೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: