ಮೈಸೂರು

ಅರಿವಿನ ಬೆಳಕು ಸಾವಿತ್ರಿಬಾಯಿಫುಲೆ ಕೃತಿ ಲೋಕಾರ್ಪಣೆ

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಅಂತರಸಂತೆ ಪ್ರಕಾಶನ, ಕನ್ನಡಿಗರ ಸಹಕಾರ ಜ್ಯೋತಿ, ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆ ಸಹಯೋಗದಲ್ಲಿ ಟಿ.ನಾಗರಾಜು ಮತ್ತು ಡಿ.ಈರೇಶ್ ನಗರ್ಲೆ ಸಂಪಾದಕತ್ವದ ಅರಿವಿನ ಬೆಳಕು ಸಾವಿತ್ರಿಬಾಯಿ ಫುಲೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಭಾರತೀಯ ಮಹಿಳಾ ಸಂಘದ ಪ್ರಾಂತೀಯ ಅಧ್ಯಕ್ಷೆ ಪ್ರತಿಮಾ ಪ್ರಸಾದ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಸಾಹಿತಿ ಪ್ರೊ.ಕೆ.ಎಸ್.ಭಗವಾನ್,  ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಸ್ನೇಹ ಬಳಗದ ಎಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: