ಮನರಂಜನೆಮೈಸೂರು

ಫೆ.14ರಂದು ‘ಗಡ್ಡಪ್ಪನ ಸರ್ಕಲ್’ ಚಿತ್ರ ರಾಜ್ಯಾದ್ಯಂತ ತೆರೆಗೆ

ಮೈಸೂರು,ಜ.31:- ಶ್ರೀಶ್ರೀನಿವಾಸ್ ಸಿನೆಮಾಸ್ ನ ಬ್ಯಾನರ್ ನಲ್ಲಿ ತುಳಸೀರಾಮ್ ನಿರ್ಮಿಸಿರುವ ಬಿ.ಆರ್.ಕೇಶವ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಗಡ್ಡಪ್ಪನ ಸರ್ಕಲ್’ ಕನ್ನಡ ಚಿತ್ರ ಫೆ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಥಿ ಖ್ಯಾತಿಯ ನಟರಾದ ಗಡ್ಡಪ್ಪ ಮಾತನಾಡಿ ಸೆಂಚುರಿ ಗೌಡ, ಅಭಿ ಚಿತ್ರದಲ್ಲಿ ಮುಖ್ಯ ತಾರಾಗಣದಲ್ಲಿದ್ದು, ಸುಕನ್ಯ ತುಳಸಿರಾಮ್, ವಿಶ್ವಾಸ್, ಕನ್ನಡಿಗ ಯೋಗಿ, ರಾಮ್ ನಟಿಸಿದ್ದಾರೆಂದರು. ನಿರ್ಮಾಪಕ ತುಳಸೀರಾಮ್ ಮಾತನಾಡಿ ಶೇಷಗಿರಿರಾವ್ ಸಾಹಿತ್ಯ ಸಂಭಾಷಣೆ, ವಿ.ಕೆ.ನಯನ್ ಅವರ ಸಂಗೀತ, ಪ್ರಮೋದ್ ಅವರ ಛಾಯಾಗ್ರಹಣ, ಸಿದ್ದರಾಜು ಅವರ ಸಂಕಲನವಿದೆ ಎಂದರು.

ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮೈಸೂರು ಮತ್ತು ಮಂಡ್ಯದ ಸುತ್ತಮುತ್ತ ಮಾಡಲಾಗಿದೆ. ಈ ಚಿತ್ರದಲ್ಲಿ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಡಾನ್ ಪಾತ್ರಗಳಲ್ಲಿ ನಟಿಸಿರುವುದು ಒಂದು ವಿಶೇಷತೆ. ಹಳ್ಳಿ ವಸ್ತ್ರಗಳನ್ನು ಧರಿಸಿ ಪಾತ್ರ ನಿರ್ವಹಿಸುತ್ತಿದ್ದ ಗಡ್ಡಪ್ಪ ಮತ್ತು ಸೆಂಚುರಿಗೌಡ ಈ ಚಿತ್ರದಲ್ಲಿ ಸೂಟು-ಬೂಟು ಧರಿಸಿ ಮಿಂಚಿದ್ದಾರೆ. ಅಭಿ ಮತ್ತೆ ರೋಮಿಯೋ ಪಾತ್ರದಲ್ಲಿ ಎಲ್ಲರನ್ನೂ ರಂಜಿಸುತ್ತಾರೆ. ಈ ಚಿತ್ರದಲ್ಲಿ ಎರಡು ಗೀತೆಗಳು ಸುಂದರವಾಗಿ ಮೂಡಿ ಬಂದಿವೆ. ‘ ಗಡ್ಡಪ್ಪನ ಸರ್ಕಲ್’ ಚಲನಚಿತ್ರ ಎಲ್ಲರಿಗೂ ಹಾಸ್ಯದ ರಸದೌತಣ ತೆರೆಯ ಮೇಲೆ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: