
ಮೈಸೂರು, ಫೆ.1:- ಎಸ್ ಬಿ ಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪುರುಷರ ಕ್ರಿಕೆಟ್ ತಂಡವು ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಕ್ರಿಕೆಟ್ ನಲ್ಲಿ ಜಯ ಸಾಧಿಸಿದ ತಂಡದ ನಾಯಕ ಸತೀಶ್ ಎಸ್, ಸೋಮಶೇಖರ್, ಶಶಾಂಕ್ ಎಂ. ಆರ್., ಸೂರ್ಯ ಎ ಎನ್, ಚೇತನ್ ಎಂ, ಮಿಥುನ್ ಎಂ ಎಸ್, ಸಿಬ್ಟ್ನ್ ಆಲಿ, ಅಮೃತ್ರಾಜ್, ಸುಪ್ರಿತ್, ದೀಪಕ್, ನಿಶಾಂತ್ ಎಸ್, ಹೇಮಂತ್ಕುಮಾರ್, ಸುಹಾಸ್ ಎಸ್, ಹೇಮಂತ್ಕುಮಾರ್ ಎಲ್ ಅವರನ್ನು ಡಾ. ಸೋಮಶೇಖರ್ ಕೆ ಕೆ, ಡಾ. ಭಾಸ್ಕರ್ ಹೆಚ್ ಎನ್, ದೈಹಿಕ ಶಿಕ್ಷಣ ನಿರ್ದೇಶಕರು, ಡಾ. ಎಸ್ ಆರ್ ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರು, ಡಾ. ವಿಜಯಲಕ್ಷ್ಮೀ ಮುರಳೀಧರ್, ಗೌ. ಕಾರ್ಯದಶಿ, ಮಹಾಜನ ವಿದ್ಯಾಸಂಸ್ಥೆ, ಡಾ. ಎಸ್. ವೆಂಕಟರಾಮು, ಪ್ರಾಂಶುಪಾಲರು, ಜಯಕುಮಾರಿ, ಉಪ-ಪ್ರಾಂಶುಪಾಲರು ಹಾಗೂ ಪಿ ಎಸ್. ಮಧುಸೂಧನ, ದೈಹಿಕ ಶಿಕ್ಷಣ ನಿರ್ದೇಶಕರು ಇವರು ಅಭಿನಂದಿಸಿದ್ದಾರೆ. (ಜಿ.ಕೆ, ಎಸ್.ಎಚ್)