ಮೈಸೂರು

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ದ್ರೋಣ್ ಯಶಸ್ವಿ ಹಾರಾಟ

ವಿದ್ಯಾರ್ಥಿಗಳು ತಂತ್ರಜ್ಞಾನದ ಸಹಾಯದಿಂದ ನೂತನ ಪ್ರಯೋಗಗಳ ಮೂಲಕ ಸಾಧನೆ ಮೆರೆಯುವುತ್ತಿರುವುದು ಪ್ರಶಂಸಹನೀಯವಾಗಿದೆ. ಭದ್ರತಾ ವ್ಯವಸ್ಥೆ ಸೇರಿದಂತೆ ಕಣ್ಗಾವಲು ಹಾಗೂ ರಕ್ಷಣಾ ಕ್ಷೇತ್ರದ ಅದ್ವೀತಿಯ ಸಾಧನವಾಗಿರುವ ದ್ರೋಣ್ ಉಪಕರಣವನ್ನು ವಿದ್ಯಾರ್ಥಿಗಳೇ ತಯಾರಿ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದೇ ಯೋಜನೆಯನ್ನೇ ನಿಮ್ಮ ಅಂತಿಮ ವರ್ಷದ ಪ್ರಾಜಕ್ಟ್ ವರ್ಕ್ ಅಲ್ಲಿ ಮಾರ್ಪಡಿಸಿ ನಾವೀನ್ಯತೆಯಿಂದ ತಯಾರಿಸಿ ಎಂದು ಎಟಿಎಂಇ ಕಾಲೇಜಿನ ಪ್ರಾಂಶುಪಾಲ ಡಾ.ಎಲ್.ಬಸವರಾಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ‘ದ್ರೋಣ್ ಸಲಕರಣೆ’ ಬಗ್ಗೆ ನಡೆದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದ್ರೋಣ ಉಪಕರಣವನ್ನು ತಯಾರಿಸಿ ಪ್ರಾಯೋಗಿಕವಾಗಿ ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದರು. ಬೆಂಗಳೂರಿನ ಸ್ಕೈಫಿಟ್  ಲ್ಯಾಬ್ ನ ತಜ್ಞ ರಾಮನಾಥ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿದರು. ಮೊದಲ ದಿನದಂದು ಬೇಹರ್ ಸಿಂಗ್ ಏರೋಡೈನಾಮಿಕ್ ಮತ್ತು ದ್ರೋಣ್ ನ ವಿವಿಧ ಬಗೆಗಳ ಬಗ್ಗೆ ವಿವರವಾಗಿ ಬೋಧಿಸಿದರು. ವಿದ್ಯಾರ್ಥಿಗಳ 11 ತಂಡಗಳನ್ನು ರಚಿಸಲಾಗಿತ್ತು, ಪ್ರತಿ ತಂಡದಲ್ಲೂ ಐದು ಜನರಿದ್ದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ.ರತ್ನಾಕರ , ಧನುಷ್  ಹಾಗೂ ಪ್ರೊ.ದೇವರಾಜ್ ಉಪಸ್ಥಿತರಿದ್ದರು.

ಎರಡನೇ ದಿನದಂದು ವಿದ್ಯಾರ್ಥಿಗಳು ತಾವೇ ತಯಾರಿಸಿದ ದ್ರೋಣ್ ನ್ನು  ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಉಡಾವಣೆ ನಡೆಸಿದರು. ಈ ಕಾರ್ಯಾಗಾರದಿಂದ ಹಲವಾರು ನೂತನ ವಿಷಯಗಳನ್ನು ತಿಳಿಯಲಾಯಿತು ಎಂದು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

comments

Tags

Related Articles

error: