ಮೈಸೂರು

ಕಾರು ಮತ್ತು ಆಟೋ ನಡುವೆ  ಡಿಕ್ಕಿ : ಚಾಲಕ ಸ್ಥಳದಲ್ಲೇ ಸಾವು : ಮೂವರು ಪೊಲೀಸರಿಗೆ ಗಾಯ

ಮೈಸೂರು,ಫೆ.1:- ಕಾರು ಮತ್ತು ಆಟೋ ನಡುವೆ  ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ  ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ ಆಟೋದಲ್ಲಿ ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು – ತಿ.ನರಸೀಪುರ ರಸ್ತೆಯಲ್ಲಿ ಕಾರೊಂದು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಆಟೋ ಚಾಲಕ ಹೊಸಹುಂಡಿಯ ನಿವಾಸಿ ಶಿವು(35) ಸಾವನ್ನಪ್ಪಿದ್ದಾರೆ. ಆಟೋದಲ್ಲಿದ್ದ ಮೂವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ದೇವರಾಜ ಪೊಲೀಸ್ ಠಾಣೆಯ ಎ ಎಸ್‌ಐ ಕೃಷ್ಣಮೂರ್ತಿ, ಎಎಸ್‌ಐ ಸುಬ್ರಮಣ್ಯ, ಮುಖ್ಯಪೇದೆ ರವಿಕುಮಾರ್ ಗಾಯಗೊಂಡಿದ್ದು, ಇವರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: