ಮೈಸೂರು

ಹಳೆಯ ಮತ್ತು ಹೊಸ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ಎನ್‍ಆರ್ ಫೌಂಡೇಷನ್ ವತಿಯಿಂದ ರಂಗ ರಾವ್ ಸ್ಮಾರಕ ಅಂಗವಿಕಲರ ಶಾಲೆಯ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗು ಹಾಲಿ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು   ಆಯೋಜಿಸಲಾಗಿತ್ತು.

ಶ್ರೇಷ್ಠ ಬರಹಗಾರ್ತಿ  ಛಾಯಾಶ್ರೀವತ್ಸ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮದ ಭಾಗವಾಗಲು ನನಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ರಂಗ ರಾವ್ ಸ್ಮಾರಕ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿದ್ದಾರೆ. ಜ್ಞಾನವನ್ನು ಪಡೆದುಕೊಳ್ಳುವ ಅವರ ಹಂಬಲ ಹಾಗೂ ಅದಮ್ಯ ಆಸಕ್ತಿಯನ್ನು ಕಂಡು ನನಗೆ ಸಂತಸವೆನಿಸುತ್ತಿದೆ. ಎನ್‍ಆರ್ ಫೌಂಡೇಷನ್‍ನ ಈ ಪ್ರಯತ್ನವನ್ನು ಶ್ಲಾಘಿಸಲೇಬೇಕು. ರಂಗ ರಾವ್ ಸ್ಮಾರಕ ಶಾಲೆಯ ಎಲ್ಲಾ ಪ್ರಸ್ತುತ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು ಎಂದು ತಿಳಿಸಿದರು.

ಎನ್.ಆರ್. ಸಮೂಹದ ಅಧ್ಯಕ್ಷ ಆರ್. ಗುರು ಮಾತನಾಡಿ ಈ ಕಾರ್ಯಕ್ರಮದ ಮೂಲಕ ನಮ್ಮ ಹಳೆಯ ವಿದ್ಯಾರ್ಥಿಗಳನ್ನೆಲ್ಲ ಒಂದೇ ವೇದಿಕೆಯಲ್ಲಿ ನೋಡಲು ಸಾಧ್ಯವಾಯಿತು. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮ ವಿದ್ಯಾರ್ಥಿಗಳನ್ನು ನೋಡಿ ನಮಗೆ ತುಂಬಾ ಸಂತಸವಾಗಿದೆ. ನಾವು ಎಲ್ಲಾ ಮಹಿಳೆಯರಿಗೆ ಮತ್ತು ನಮ್ಮ ಅಲುಮ್ನಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಮತ್ತು ಶಕ್ತಿ ಲಭ್ಯವಾಗಲಿ ಎಂದು ಹಾರೈಸಿದರು.

ಪ್ರಸ್ತುತ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಈ ಶಾಲೆಯಲ್ಲಿ ಅಧ್ಯಯನ ಮಾಡಿ ಹೋಗಿರುವ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಮಹಿಳಾ ದಿನದ ಸಂಭ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು. ಹಳೆಯ ವಿದ್ಯಾರ್ಥಿಗಳು ತಮ್ಮ ಹಳೆಯ ದಿನಗಳ ಮೆಲುಕು ಹಾಕಲು ಈ ಕಾರ್ಯಕ್ರಮ ಒಂದು ವೇದಿಕೆಯಾಗಿತ್ತು. (ಎಸ್.ಎಚ್)

Leave a Reply

comments

Related Articles

error: