ಕರ್ನಾಟಕಪ್ರಮುಖ ಸುದ್ದಿ

ವಿಷಾಹಾರ ಸೇವಿಸಿ ಮಕ್ಕಳ ಸಾವು : ಶಾಲೆಯ ಮಾಲೀಕರಿಗಾಗಿ ಪೊಲೀಸರ ಶೋಧ

ತುಮಕೂರು: ವಿದ್ಯಾವಾರಿಧಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣರಕ್ಕೆ ಸಂಬಂಧ ಶಾಲೆಯ ಮಾಲೀಕರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಆದರೆ ನಾಮಪತ್ತೆಯಾಗಿರುವ ಶಾಲೆಯ ಮಾಲೀಕ ಕಿರಣ್ ಕುಮಾರ್ ಹಾಗೂ ಕಾರ್ಯದರ್ಶಿ ಪತ್ನಿ ಕವಿತಾಕಿರಣ್ ಅವರ ಸುಳಿವು ಇನ್ನೂ ಸಿಕ್ಕಿಲ್ಲ.

ಹುಳಿಯಾರು ಪೊಲೀಸರಿಂದ ಬೆಂಗಳೂರಿನಲ್ಲೂ ಹುಡುಕಾಟ ಮುಂದುವರಿಸಿದ್ದು, ಮೂರು ದಿನವಾದರೂ ಕಿರಣ್ ಕುಮಾರ್ ಹಾಗೂ ಕವಿತಾ ಪೊಲೀಸರಿಗೆ ಸಿಗದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇಂದೂ ಸಹ ಶಾಲೆಗೆ ರಜೆ ನೀಡಲಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರುನಲ್ಲಿರುವ ವಿದ್ಯಾ ವಾರಿಧಿ ಶಾಲೆಗೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: