ಮೈಸೂರು

ರಥಸಪ್ತಮಿ ಪ್ರಯುಕ್ತ ರಾಜೀವ ನಗರದಲ್ಲಿರುವ ಸೂರ್ಯ ನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು.ಫೆ.1:- ವಿಕಾರಿ ನಾಮ ಸಂವತ್ಸರದ ಮಾಘ ಮಾಸದ ಸಪ್ತಮಿ ದಿನವಾದ ಇಂದು ಮೈಸೂರಿನ ರಾಜೀವ ನಗರದಲ್ಲಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.

ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಸೂರ್ಯನಾರಾಯಣ ದೇವರ ದರ್ಶನ ಪಡೆದು ಪುನೀತರಾದರು.

ಈ ದೇವಾಲಯಲ್ಲಿನ 10 ಅಡಿ ಎತ್ತರದ ಸೂರ್ಯನಾರಾಯಣ ಮೂರ್ತಿಯನ್ನು 02/7/2006 ರಂದು ಸ್ಥಾಪಿಸಲಾಗಿದೆ. ಈ ದೇವಾಲಯವು ದಕ್ಷಿಣ ಭಾರತದಲ್ಲಿನ ಮೊದಲ ದೇವಾಲಯ ಹಾಗೂ ಭಾರತದಲ್ಲಿನ ಎರಡನೇ ದೇವಾಲಯವಾಗಿದೆ. ರಥಸಪ್ತಮಿ ಅಂಗವಾಗಿ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ರಾಜೀವ ನಗರದ ಪ್ರಮುಖ ಬೀದಿಗಳಲ್ಲಿ ಸೂರ್ಯನಾರಾಯಣ ಮೂರ್ತಿಯ ಪುತ್ಥಳಿಯನ್ನು ಇಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗುವ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಕೆಲವು ಕಲಾತಂಡಗಳು ಪಾಲ್ಗೊಂಡಿದ್ದವು. ಮಧ್ಯಾಹ್ನ ದೇವಾಲಯದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಉತ್ತರಾಯಣ ಪುಣ್ಯಕಾಲದ ಸಪ್ತಮಿಯ ದಿನವಾದ ಇಂದು ಸೂರ್ಯನಾರಾಯಣನು ರಥವನ್ನೇರಿ ಉತ್ತರದತ್ತ ಪಯಣ ಬೆಳೆಸುತ್ತಾನೆ. ಇಂದಿನಿಂದ ತಾಪಮಾನದಲ್ಲಿ ಏರಿಕೆ ಕಂಡುಬರುವುದು. ಪುರಾಣದ ಪ್ರಕಾರ ಇಂದು ಮುಂಜಾನೆಯೇ ಜನರು ತಮ್ಮ ತಲೆ, ಭುಜ ಹಾಗೂ ತೊಡೆಗಳ ಮೇಲೆ 7 ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡುವುದರಿಂದ ಚರ್ಮರೋಗಗಳು ದೂರವಾಗಲಿವೆಯಂತೆ. 7 ಎಕ್ಕದ ಎಲೆಗಳು ಸೂರ್ಯ ನಾರಾಯಣ ರಥದಲ್ಲಿರುವ 7 ಕುದುರೆಗಳ ಪ್ರತೀಕ ಎಂದು ನಂಬಲಾಗುತ್ತದೆ. ಅದರಂತೆ ಇಂದು ಸೂರ್ಯೋದಯಕ್ಕೆ ಮೊದಲೇ ಕಾವೇರಿ ನದಿಯಲ್ಲಿ ಸಾನ್ನಮಾಡಿದರೆ. ಗಂಗಾನದಿಯಲ್ಲಿ ಸ್ನಾನ ಮಾಡಿದ್ದಕ್ಕಿಂತಲೂ ಒಂದು ಗುಲಗಂಜಿ ತೂಕದಷ್ಟು ಹೆಚ್ಚು ಫಲಸಿಗುತ್ತದೆ ಎಂಬ ನಂಬಿಕೆಯೂ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: