ಮೈಸೂರು

ಮಧ್ವಾಚಾರ್ಯ ,ರಾಮಾನುಜಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು  ಒತ್ತಾಯಿಸಿ ಮುಜರಾಯಿ ಸಚಿವರಿಗೆ ಮನವಿ

ಮೈಸೂರು,ಫೆ.2:- ಮಧ್ವಾಚಾರ್ಯ  ಜಯಂತಿ ಹಾಗೂ ರಾಮಾನುಜಾಚಾರ್ಯರ  ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು  ಒತ್ತಾಯಿಸಿ ಮುಜರಾಯಿ ಸಚಿವ  ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಚಾಮುಂಡಿ ಬೆಟ್ಟದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಭಾರತ ಹಿಂದೂಗಳ ದೇಶವಾಗಿ ಸ್ಥಾಪಿತವಾಗಿದೆ ಎಂದರೆ ಅದಕ್ಕೆ 8ನೇ ಶತಮಾನದಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರ.  ಕೇವಲ 32ವರ್ಷವಿದ್ದರೂ ಸಹ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ  ದ್ವೈತ ಸಿದ್ದಾಂತದ  ಪ್ರಚಾರ ಮಾಡಿ ಮೂಲಕ ಸನಾತನ ಪರಂಪರೆಯ ಪ್ರಾತಃ ಸ್ಮರಣೀಯರು. ಹಿಂದೂ ಧರ್ಮದ ಜಾಗೃತಿ ಕೆಲಸವನ್ನು ಯಾವುದೇ ಮಾಧ್ಯಮ ಸಂಪರ್ಕವಿಲ್ಲದೆ ಅವರು ಮಾಡಿರುವುದು ಇವತ್ತಿನ ಹಿಂದೂಪರ ಸಂಘಟನೆಗಳಿಗೆ ಮಾದರಿಯಾಗಿದೆ. ಹಾಗೆಯೇ  ರಾಜ್ಯ ಸರ್ಕಾರ ಶಂಕರ ಜಯಂತಿಯನ್ನು ಆಚರಿಸುತ್ತಿರುವುದು ಮತ್ತು ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನದಲ್ಲಿ ಶಂಕರ ಜಯಂತಿ ಜೊತೆಯಲ್ಲೇ  ರಾಮಾನುಜರ ಮಧ್ವರ ಜಯಂತಿಯನ್ನು ಸರ್ಕಾರದ ವತಿಯಿಂದ  ಆಚರಿಸಬೇಕೆಂದು ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ  ಶಾಸಕರಾದ ಎಲ್ ನಾಗೇಂದ್ರ ,ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ , ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಮತ್ತು  ಕಡಕೋಳ ಜಗದೀಶ್, ಚಕ್ರಪಾಣಿ, ಕೆ ಎಂ ನಿಶಾಂತ್,ಬಿಜೆಪಿ ಮುಖಂಡರಾದ ಜೋಗಿ ಮಂಜು, ಮುಜರಾಯಿ ತಹಶೀಲ್ದಾರ್ ಯತಿರಾಜ್ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: