ಪ್ರಮುಖ ಸುದ್ದಿಮನರಂಜನೆ

ಬಿಗ್ ಬಾಸ್ ಕನ್ನಡ ಸೀಸನ್ 7ರ ವಿಜೇತರಾಗಿ ಹೊರಹೊಮ್ಮಿದ ನಟ ಶೈನ್ ಶೆಟ್ಟಿ

ರಾಜ್ಯ(ಬೆಂಗಳೂರು)ಫೆ.3:- ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ   ಕನ್ನಡದ ಬಿಗ್ ಬಾಸ್ ಸೀಸನ್ 7ರ 113 ದಿನಗಳ ಅದ್ಭುತ  ಪ್ರಯಾಣ ಕೊನೆಗೊಂಡಿದ್ದು, ಕುಂದಾಪುರ ಮೂಲದ ನಟ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಾಸುಕಿ ವೈಭವ್ ಮನೆಯಿಂದ ಹೊರಬಂದ ಬಳಿಕ   ಕಾಮಿಡಿ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕುರಿ ಪ್ರತಾಪ್  ಹಾಗೂ ಶೈನ್ ಶೆಟ್ಟಿ ನಡುವೆ ಭಾರೀ ಪೈಪೋಟಿ ನಡೆದಿತ್ತು. ಕುರಿ ಪ್ರತಾಪ್ ಮೇಲೆ ಹಲವು ಮಂದಿ ನಿರೀಕ್ಷೆ ಹೊಂದಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಕುಂದಾಪುರದ ಶೈನ್ ಶೆಟ್ಟಿ ವಿಜಯದ ನಗೆ  ಬೀರಿದರು. ಕುರಿ ಪ್ರತಾಪ್ ರನರ್ ಅಪ್ ಗೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಶೈನ್ ಬಿಗ್ ಬಾಗ್ ಟ್ರೋಫಿ ಮಾತ್ರವಲ್ಲದೇ ಬಿಗ್ ಬಾಸ್ ಘೋಷಣೆ ಮಾಡಿರುವ 50 ಲಕ್ಷ ಹಾಗೂ ಹೆಚ್ಚುವರಿಯಾಗಿ 11 ಲಕ್ಷ ಒಟ್ಟು 61 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದು, ಟಾಟಾ ಅಲ್ ಟ್ರೋಜ್ ಕಾರನ್ನು ಬಹುಮಾನವಾಗಿ ಪಡೆದಿದ್ದಾರೆ. 16 ವಾರಗಳ ಕಾಲ ಪ್ರಾಮಾಣಿಕವಾಗಿ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿದ್ದು, ತಮಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ಆರ್ಪಿಸುವುದಾಗಿ ಶೈನ್ ಶೆಟ್ಟಿ ಈ ಸಂದರ್ಭ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: