ಮೈಸೂರು

ಪ್ಲಂಬರ್ಸ್ ದಿನಾಚರಣೆ ಪ್ರಯುಕ್ತ ಬೈಕ್ ರ್ಯಾಲಿಗೆ ಚಾಲನೆ

ಆಶೀರ್ವಾದ್ ಪೈಪ್ಸ್ ವತಿಯಿಂದ  ಶನಿವಾರ ವಿಶ್ವ ಪ್ಲಂಬಿಂಗ್ ದಿನಾಚರಣೆಯನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪ್ಲಂಬರ್ಸ್ ಬೈಕ್ ರ್ಯಾಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಡಿ.ಧ್ರುವಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ಲಂಬರ್ಸ್ ಗೂ ಒಂದು ದಿನವನ್ನು ಮೀಸಲಿಟ್ಟು ಆಚರಣೆ ನಡೆಸುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಅವರು ಯಾವುದೇ ಸಮಯದಲ್ಲಿ ಕರೆದರೂ  ಬೇಸರಿಸದೇ ಆಗಮಿಸಿ ನಿಷ್ಠೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ನೀರು ವೃಥಾ ಹಾಳಾಗದಂತೆ ತಡೆಯುವಲ್ಲಿ ಅವರ ಪಾತ್ರ ಹಿರಿದು ಎಂದರು.

ರ್ಯಾಲಿಯು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸ್ಥಳೀಯ ಸುಮಾರು 150ಕ್ಕೂ ಅಧಿಕ ಪ್ಲಂಬರ್ಸ್ ಗಳು ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: