ಮೈಸೂರು

ಹೆಚ್1ಎನ್1 ಗೆ ಮಹಿಳೆ ಬಲಿ

ಹೆಚ್1ಎನ್1 ಮಹಾಮಾರಿ ಮೈಸೂರಿಗರನ್ನು ಆತಂಕಕ್ಕೆ ನೂಕಿದೆ. ಈಗಾಗಲೇ 6 ಬಲಿಗಳನ್ನು ಪಡೆದಿರುವ ಹೆಚ್1ಎನ್1 ಗೆ ಶನಿವಾರ ನಗರದಲ್ಲಿ ಮತ್ತೋರ್ವ ಮಹಿಳೆ ಬಲಿಯಾಗಿದ್ದು, ಒಟ್ಟು ಏಳುಮಂದಿ ಸಾವನ್ನಪ್ಪಿದಂತಾಗಿದೆ.

ಈಗಾಗಲೇ 250ಕ್ಕೂ ಅಧಿಕ ಜ್ವರಪೀಡಿತರ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 118 ಸ್ಯಾಂಪಲ್ ಗಳ ಫಲಿತಾಂಶ ಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಬಸವರಾಜು ತಿಳಿಸಿದರು.

ಹೆಚ್1ಎನ್1 ಗೆ ಬಲಿಯಾದ ಮಹಿಳೆಯನ್ನು ಮೈಸೂರು ನಗರ ನಿವಾಸಿ ಪೂರ್ಣಿಮಾ ಎಂದು ಗುರುತಿಸಲಾಗಿದೆ. ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಅವರು ಹೆಚ್1ಎನ್1 ನಿಂದ ಮೃತಮಟ್ಟಿರುವುದು ದೃಢಪಟ್ಟಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: