ಮೈಸೂರು

ಪಿಗ್ಮಿ ಹಣ ವಾಪಸ್ ಕೊಡದೆ ನ್ಯೂ ಡೈಮಂಡ್ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯಿಂದ ವಂಚಿಸಿದ ಆರೋಪ : ವ್ಯಕ್ತಿಯಿಂದ ದೂರು

ಮೈಸೂರು,ಫೆ.4:- ಪಿಗ್ಮಿ ಹಣವನ್ನು ವಾಪಸ್ ಕೊಡದೆ ನ್ಯೂ ಡೈಮಂಡ್ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ವಂಚಿಸಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ತ್ಯಾಗರಾಜ ರಸ್ತೆಯ ಮಂಜುನಾಥ ಡೈ ಕ್ಲೀನರ್‌ನ ಆರ್.ಈರಯ್ಯ ಎಂಬವರೇ ದೂರು ನೀಡಿದವರಾಗಿದ್ದು, ತ್ಯಾಗರಾಜ ರಸ್ತೆಯಲ್ಲಿರುವ ನ್ಯೂ ಡೈಮಂಡ್ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಎಂಬ ಸೊಸೈಟಿಯಲ್ಲಿ 2018ರ ನವೆಂಬರ್ ತಿಂಗಳಿನಿಂದ  ಪಿಗ್ಮಿ ಯೋಜನೆಗೆ ಸೇರಿದ್ದು, ಪ್ರತಿದಿನ 100 ರೂ. ಪಾವತಿ ಮಾಡುತ್ತಿದ್ದೇನೆ. ಅದರ ಅಕೌಂಟ್ ನಂಬರ್  10041000032 ಆಗಿದೆ.  ಪಿಗ್ಮಿ ಅಕೌಂಟ್ ಗೆ ನಾನು  ಕಟ್ಟಿರುವ 20 ಸಾವಿರ ರೂ.ಗಳನ್ನು ನನ್ನ ಅವಶ್ಯಕತೆಗೆ ತೆಗೆದುಕೊಳ್ಳಲು ಸೊಸೈಟಿಗೆ ಅರ್ಜಿ   ಸಲ್ಲಿಸಿ 3ತಿಂಗಳಾದರೂ, ಸೊಸೈಟಿಯವರು ಹಣ ಕೊಡದೆ ಸತಾಯಿಸುತ್ತಿದ್ದಾರೆ.   ಪಿಗ್ಮಿ ಹಣ ವಸೂಲು ಮಾಡಲು ನನ್ನ ಲಾಂಡ್ರಿಗೆ ಬರುತ್ತಿದ್ದ ಸೊಸೈಟಿಯ ಬಿಲ್ ಕಲೆಕ್ಟರ್‌ಗಳಾದ ಶಿವಶಂಕರ್, ನಿಶ್ಚಯ್, ಸೊಸೈಟಿಯಲ್ಲಿ ಅಕೌಂಟ್ ನೋಡಿಕೊಳ್ಳುವ ನಾಗಮಣಿ, ಸೊಸೈಟಿಯ ಮ್ಯಾನೇಜರ್ ಶಶಿಕಾಂತ ಜೈನ್ ಬಳಿ ನಾನು ಎಷ್ಟು ಬಾರಿ ಹೋಗಿ ಕೇಳಿದರೂ ಹಣ ನೀಡುತ್ತಿಲ್ಲ. ನಾಳೆ ಕೊಡುತ್ತೇವೆ, ಮುಂದಿನ ವಾರ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾ ವಂಚಿಸುತ್ತಿದ್ದಾರೆ. ಇದಲ್ಲದೆ ಶಿವಶಂಕರ ಎಂಬ ಪಿಗ್ಮಿ ಕಲೆಕ್ಟರ್ ಕೆಲವು ದಿನಗಳ ಹಿಂದೆ ನನ್ನ ಲಾಂಡ್ರಿಗೆ ಬಂದು ನಿಮ್ಮ ಹಣದ ಚೆಕ್ ಬಂದಿದೆ. ಆದ್ದರಿಂದ ನಿಮ್ಮ ಪಿಗ್ಮಿ ಅಕೌಂಟ್‌ನ ಪಾಸ್ ಬುಕ್ ಕೊಟ್ಟರೆ ಚೆಕ್ ಕೊಡುತ್ತೇವೆ ಎಂದು ನಂಬಿಸಿ ಪಾಸ್ ಬುಕ್ ತೆಗೆದುಕೊಂಡು ಹೋಗಿದ್ದು, ಆ ದಿನದಿಂದಲೂ ಅವನು ನನಗೆ ಸಿಕ್ಕಿಲ್ಲ. ಕರೆಯನ್ನೂ ಸ್ವೀಕರಿಸುತ್ತಿಲ್ಲ. ಆದ್ದರಿಂದ ಸಹಕಾರ ಸಂಘದ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೊಸೈಟಿಯಿಂದ ನನಗೆ ಬರಬೇಕಾಗಿರುವ ನನ್ನ ಉಳಿತಾಯದ ಹಣವನ್ನು ಕೊಡಿಸಿಕೊಡಬೇಕೆಂದು ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: