ಮೈಸೂರು

ಸಚಿನ್ ಜಸ್ಟ್ ಡ್ರೈವ್ ದಿನದ 24ಗಂಟೆಗಳ ಚಾಲಕರ ಸೇವಾ ಸಂಸ್ಥೆ ನಗರದಲ್ಲಿ ಆರಂಭ

ಮೈಸೂರು,ಫೆ.4:- ಮೈಸೂರು ಸಚಿನ್ ಜಸ್ಟ್ ಡ್ರೈವ್ ದಿನದ 24ಗಂಟೆಗಳ ಚಾಲಕರ ಸೇವಾ ಸಂಸ್ಥೆ ನಗರದಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾದೇಶ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಾಗ ಅಪಘಾತ ಸಂಭವಿಸುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಅನೇಕರ ಬಳಿ ವಾಹನವಿದ್ದರೂ ಚಾಲನೆ ಗೊತ್ತಿಲ್ಲದವರಿಗೆ ಅಸಹಾಯಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ. ವಿವಿಧ ರೀತಿಯ ಸೇವೆಗಳಿಗೆ ವಿವಿಧ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದರು.

ವಾಹನ ಚಾಲಕರೇ ಸೇರಿ ಈ ಸಂಸ್ಥೆಯನ್ನು ಮಾಡಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಸಂಸ್ಥೆ ಯಶಸ್ಸು ಸಾಧಿಸಿದೆ. ಮುಂದೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ವೃದ್ಧರಿಗೆ, ಅಂಗವಿಕಲರಿಗೆ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸಲಾಗುವುದು. ಪ್ರಯಾಣಿಕರ, ಚಾಲಕರ ಭದ್ರತೆಗೆ ಆದ್ಯತೆ ನೀಡಲಾಗುವುದು. ಬುಕ್ಕಿಂಗ್ ಗೆ 9620277177,96000811ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಪಾರ್ಥಸಾರಥಿ, ಮಂಜುನಾಥ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: