ಮೈಸೂರು

ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮೈಸೂರು,ಫೆ.4:- ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ವ್ಯಕ್ತಿಯ ವಯಸ್ಸು ಸುಮಾರು60-65, ಸಾಧಾರಣ ಮೈಕಟ್ಟು ಎಣ್ಣೆಗೆಂಪು ಬಣ್ಣ, ಎತ್ತರ 5.7 ಅಡಿ. ತುಂಬು ತೋಳಿನ ಬಿಳಿ ಶರ್ಟ್, ನೀಲಿ ಬಣ್ಣದ ಟ್ರಾಕ್ ಪ್ಯಾಂಟ್,  ಕಪ್ಪು ನಿಕ್ಕರ್ ಧರಿಸಿದ್ದು, ನೀಲಿ- ಬಿಳಿ ಬಣ್ಣದ ಲುಂಗಿ ಸಿಕ್ಕಿದೆ. ಕತ್ತಿನಲ್ಲಿ ಕಪ್ಪುದಾರವಿದೆ. ತಲೆಗೂದಲು ಮೀಸೆ ಬಿಳಿಯಾಗಿದೆ. ಮೃತದೇಹವನ್ನು ಸರ್ಕಾರಿ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ಪತ್ತೆಯಾದಲ್ಲಿ ವರುಣಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0821-2594411ನ್ನು ಸಂಪರ್ಕಿಸುವಂತೆ ವರುಣ ಪೊಲೀಸ್ ಠಾಣೆಯ ಪಿಎಸ್ ಐ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: