ದೇಶಪ್ರಮುಖ ಸುದ್ದಿ

ಸೋನಿಯಾ ಗಾಂಧಿಗೆ ಉದರ ಸಂಬಂಧಿ ಸೋಂಕು

ನವದೆಹಲಿ,ಫೆ.4-ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ಉದರ ಸಂಬಂಧಿ ಸೋಂಕು ಕಾಣಿಸಿಕೊಂಡಿದೆ.

ಸರ್ ಗಂಗಾರಾಮ್ ಆಸ್ಪತ್ರೆ ನಿನ್ನೆ ಸೋನಿಯಾ ಅವರ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದ್ದು, ಅವರ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಅನಾರೋಗ್ಯದಿಂದಾಗಿ ಸೋನಿಯಾ ಗಾಂಧಿಯವರು ಭಾನುವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆನೋವಿನಿಂದ ಸೋನಿಯಾ ಬಳಲುತ್ತಿದ್ದಾರೆಂದು ಹೇಳಲಾಗುತ್ತಿತ್ತು.

ಅನಾರೋಗ್ಯದ ಕಾರಣದಿಂದಾಗಿ ಶನಿವಾರ ಕೇಂದ್ರ ಹಣಕಾಸು ಬಜೆಟ್ ಮಂಡನೆಯ ವೇಳೆ ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಉಪಸ್ಥಿತರಿರಲಿಲ್ಲ. 2011ರಲ್ಲಿ ಸೋನಿಯಾ ಅವರು ಕಾಯಿಲೆಯೊಂದಕ್ಕೆ ಅಮೆರಿಕಾದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಆರೋಗ್ಯ ತಪಾಸಣೆಗಾಗಿ ಆಗಾಗ ಅಮೆರಿಕಾಕ್ಕೆ ಸೋನಿಯಾ ತೆರಳುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: