ದೇಶಪ್ರಮುಖ ಸುದ್ದಿ

2019ರ ಚುನಾವಣೆಯಲ್ಲೂ ಮೋದಿಯನ್ನು ಎದುರಿಸುವ ನಾಯಕರಿಲ್ಲ ; ಓಮರ್ ಅಬ್ದುಲ್ಲಾ ಹತಾಶೆ!

ಶ್ರೀನಗರ : ನಿರೀಕ್ಷೆಗೂ ಮೀರಿ ಜನಬೆಂಬಲ ಪಡೆದಿರುವ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, 2019ರ ಚುನಾಣೆಯಲ್ಲೂ ಮೋದಿಯನ್ನು ಎದುರಿಸುವ ನಾಯಕರು ಇಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಮೋದಿಯನ್ನು ಎದುರಿಸಬಲ್ಲ ಮತ್ತೊಬ್ಬ ನಾಯಕರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇವಲ ಟೀಕಿಸುವುದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮೋದಿಗೆ ಪರ್ಯಾಯವಾಗಿ ಸಕಾರಾತ್ಮಕ ದೂರದೃಷ್ಟಿ ಹೊಂದಿರುವ ನಾಯಕತ್ವ ತೋರುವವರೆಗೆ ಜನತೆ ಮೋದಿಯವರ ಗುಂಗಿನಲ್ಲೇ ಇರುತ್ತಾರೆ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್, ಗೋವಾ, ಮಣಿಪುರ ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಖಾಸುಮ್ಮನೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಸಕಾರಾತ್ಮಕ ಪರ್ಯಾಯ ನಾಯಕತ್ವವನ್ನು ಜನತೆಯ ಮುಂದಿಡಬೇಕಿದೆ ಎಂದು ಅಬ್ದುಲ್ಲಾ ಕಿವಿಮಾತು ಹೇಳಿದ್ದಾರೆ.

(ಎನ್‍.ಬಿಎನ್)

Leave a Reply

comments

Related Articles

error: