ಮೈಸೂರು

ಪುಣ್ಯ ತೀರ್ಥ ಯಾತ್ರೆ ವಿಶೇಷ ರೈಲು ಪ್ರವಾಸ

ಮೈಸೂರು,ಫೆ.4:- ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು   ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸಾರ್ವಜನಿಕ ಉದ್ಯಮ ಆಗಿದ್ದು, ಈ ಬಾರಿ ಭಕ್ತರು ಹಾಗೂ ಪ್ರವಾಸಿಗರಿಗಾಗಿ  ಪುಣ್ಯ ತೀರ್ಥ ಯಾತ್ರೆ 9 ರಾತ್ರಿ 10 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋಜಿಸಿದೆ  ಎಂದು ಡೆಪ್ಯುಟಿ ಜನರಲ್ ಮ್ಯಾನೇಜರ್ ಎಸ್.ಜಿ.ಪಿ.ಕಿಶೋರ್ ತಿಳಿಸಿದರು

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಶೇಷ ಪ್ರವಾಸಿ ರೈಲು   20 ನೇ ಮಾರ್ಚ್ 2020 ರಂದು ಬೆಂಗಳೂರು ವೈಟ್ ಫೀಲ್ ರೈಲು ನಿಲಾಣ ದಿಂದ ಹೊರಡಲಿದೆ . ಈ ರೈಲಿನಲ್ಲಿ ಈ ಕೊನಾರ್ಕ – ಕೊಲ್ಕತ್ತಾ – ಗಯಾ -ವಾರಣಾಸಿ( ಕಾಶಿ ) – ಅಲಹಾಬಾದ್ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ . ಈ ಪ್ರವಾಸಕ್ಕೆ ತಗಲುವ ಒಟ್ಟು ವೆಚ್ಚ 9,450ರೂ.  ಮಾತ್ರ.  ಈ ಪ್ರವಾಸಕ್ಕಾಗಿ ಕೇಂದ್ರ / ರಾಜ್ಯ ಸರ್ಕಾರಿ ನೌಕರರು ಎಲ್‌ಟಿಸಿ ಸೌಲಭ್ಯ ಕೂಡ ಪಡೆಯಬಹುದು .   ಸ್ಲೀಪರ್ ಕ್ಲಾಸ್ ರೈಲು ಪ್ರಯಾಣವಿದ್ದು ಯಾತ್ರಿಗಳು ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ / ಹಾಲ್ / ಡಾರ್ಮಿಟೋರೀಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಅಥವಾ ಬುಕ್ಕಿಂಗ್ ಗಾಗಿ ಮೈಸೂರು ರೈಲು ನಿಲ್ದಾಣ 9741421486ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇಮ್ರಾಮ್ ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: