ಮೈಸೂರು

ನೀರನ್ನು ಉಳಿಸಿ : ಪೋದಾರ್ ಮಕ್ಕಳಿಂದ ಜಾಗೃತಿ ಜಾಥಾ

ಮೈಸೂರಿನ ಪೋದಾರ್ ಜಂಬೋ ಕಿಡ್ಸ್ ವತಿಯಿಂದ ನೀರನ್ನು ಉಳಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದರು.

ಮಾ.12ರಂದು ಹೋಳಿಯನ್ನು  ಆಚರಿಸಲಾಗುತ್ತಿದ್ದು ಈ ಸಂದರ್ಭ ನೀರನ್ನು ಅನಗತ್ಯ ಖರ್ಚು ಮಾಡಬೇಡಿ. ಪ್ರಕೃತಿಯಲ್ಲಿರುವ ನೀರನ್ನು ಉಳಿಸಲು ಶ್ರಮಿಸಿ ಎಂಬುದಾಗಿ ಮಕ್ಕಳು ಜನತೆಯಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಪ್ರಾಂಶುಪಾಲ ಕೃಷ್ಣಬಂಗೇರ, ಉಪಪ್ರಾಂಶುಪಾಲ ಸುನಿತಾ ದುಗ್ಗಲ್, ಆಡಳಿತಾಧಿಕಾರಿ ಶಿವಸ್ವಾಮಿ, ಪಿಂಟೋ, ಸೇರಿದಂತೆ ಶಿಕ್ಷಕರು, ಪೋಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: