ಮೈಸೂರು

ಉತ್ತರಪ್ರದೇಶ-ಉತ್ತರಾಖಂಡ ಬಿಜೆಪಿ ಗೆಲುವು : ಬಿಜೆಪಿ ಕಾರ್ಯಕರ್ತರಿಂದ ಸಿಹಿಹಂಚಿ ಸಂಭ್ರಮಾಚರಣೆ

ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಮೈಸೂರಿನ ಡಿ.ದೇವರಾಜ ಅರಸು ರಸ್ತೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ಸಂಭ್ರಮಾಚರಣೆಯ ವೇಳೆ ಯುವ ಮೋರ್ಚಾದ ಸ್ವಚ್ಛ ಭಾರತ್ ಅಭಿಯಾನದ ನಗರ ಸಂಚಾಲಕ ರಾಕೇಶ್ ಭಟ್ ಮಾತನಾಡಿ, ಜಾತಿ ರಾಜಕಾರಣ ಮತ್ತು ದುರಾಡಳಿತ ನಡೆಸಿದ ಸಮಾಜವಾದಿ ಪಕ್ಷ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷಗಳನ್ನು ಬಿಜೆಪಿಯ ಅಭಿವೃದ್ಧಿ ನೀತಿ ಧೂಳೀಪಟಗೊಳಿಸಿರುವುದು ಉತ್ತಮ ಬೆಳವಣಿಗೆ ಎಂದರು. ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಜನರಿಗೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರ ನೇತೃತ್ವದಲ್ಲಿ ಅಚ್ಛೆ ದಿನ್ ಬರಲಿದ್ದು, ಉತ್ತಮ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿಯ 36ನೇ ವಾರ್ಡ್ ಅಧ್ಯಕ್ಷ ಪ್ರಮೋದ್ ಗೌಡ, ಮಂಜುನಾಥ್ ಗೌಡ, 36ನೇ ವಾರ್ಡಿನ ಕಾರ್ಯಕರ್ತರಾದ ನಿತಿನ್, ಸಂತೋಷ್,  ಉಮೇಶ್, ಪ್ರಶಾಂತ್, ಭರತ್ ಮತ್ತಿತರರು ಹಾಜರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: