ಮೈಸೂರು

ಸುಗಮ ಸಂಚಾರಕ್ಕೆ ಅಡ್ಡಿ : ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ

ಮೈಸೂರು,ಫೆ.5:- ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ  ಇಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು  ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು.

ನಗರದ ನಂಜುಮಳಿಗೆ ಸರ್ಕಲ್ ಬಳಿ ಫುಟ್ ಪಾತ್ ಅಂಗಡಿಗಳನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.  ಪಾಲಿಕೆ ಡೆವಲಪ್ಮೆಂಟ್ ಆಫೀಸರ್ ನಂಜುಂಡಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಿದಿರಿನ ಅಂಗಡಿ, ಕೋಳಿ ಅಂಗಡಿ, ಮಡಿಕೆ ಅಂಗಡಿ ಮುಂತಾದ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಫುಟ್ಪಾತ್ ಅಂಗಂಡಿಗಳನ್ನು  ತೆರವುಗೊಳಿಸಲಾಗಿದ್ದು ಅಂಗಡಿ ತೆರವಿನ ಬಗ್ಗೆ ನಿನ್ನೆಯೇ ವ್ಯಾಪಾರಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಸೂಚನೆ ನೀಡಿತ್ತು.   ಮತ್ತೊಮ್ಮೆ ಫುಟ್ ಪಾತ್ ನಲ್ಲಿ ಅಂಗಡಿ ತೆರೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: