ದೇಶಪ್ರಮುಖ ಸುದ್ದಿ

ನಕ್ಸಲ್ ದಾಳಿ ; 11 ಸಿಆರ್‌ಪಿಎಫ್‌ ಯೋಧರ ಸಾವು

ರಾಯಪುರ: ಛತ್ತೀಸ್‍ಗಡದ ಸುಖಾಮ ಜಿಲ್ಲೆಯ ಭೇಜ್ಜಿ ಪೊಲೀಸ್ ಠಾಣಾ ವಲಯದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ನಕ್ಸಲ್‍ ದಾಳಿಯಲ್ಲಿ 11 ಯೋಧರು ಹುತಾತ್ಮರಾಗಿದ್ದು, ಐವರಿಗೆ ಗಂಭಿರ ಗಾಯಗಳಾಗಿವೆ.

ಕೊಟಾಚೆರು ಎಂಬ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದ ಸುಮಾರು 112 ಸಿಆರ್‌ಪಿಎಫ್ ಯೋಧರ ಮೇಲೆ ಬೆಳಿಗ್ಗೆ 9.15ರ ಹೊತ್ತಿಗೆ ದಾಳಿ ನಡೆಸಿದ ನಕ್ಸಲರು, ಯೋಧರ ಬಳಿಯಿದ್ದ ಶಸ್ತ್ರಾಸ್ತ್ರಗಳು ಹಾಗೂ ರೇಡಿಯೋಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸುರಕ್ಷತಾ ದೃಷ್ಟಿಯಿಂದ 219 ಜನರಿದ್ದ ಸಿಆರ್‌ಪಿಎಫ್ ಯೋಧರ ಪಡೆಯನ್ನು ನಿಯೋಜಿಸಲಾಗಿತ್ತು. ಈ ಸಮಯ ಅರಣ್ಯದಲ್ಲಿ ಸಂಚರಿಸುತ್ತಿದ್ದ ನಕ್ಸಲರು ಆಕ್ರಮಣ ಮಾಡಿದ್ದಾರೆ. ಮೊದಲು ಯೋಧರ ಬಳಿ ಇದ್ದ ಸುಧಾರಿತ ಉಪಕರಣಗಳನ್ನು ಸ್ಫೋಟಗೊಳಿಸಿದ ನಕ್ಸಲರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಹೆಚ್ಚಿನ ರಕ್ಷಣೆಗಾಗಿ ಘಟನಾ ಸ್ಥಳಕ್ಕೆ ವಿಶೇಷ ಕೋಬ್ರಾ ಪಡೆ ದೌಡಾಯಿಸಿದೆ. ಗಾಯಗೊಂಡವರನ್ನು ಭೇಜ್ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ದೇಹಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: