ಪ್ರಮುಖ ಸುದ್ದಿವಿದೇಶ

ಅಮೇರಿಕ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ  ಮಂಡಿಸಿದ್ದ ವಾಗ್ದಂಡನೆಗೆ ಸೋಲು : ಟ್ರಂಪ್ ಗೆ ಗೆಲುವು

ವಿದೇಶ(ವಾಷಿಂಗ್ಟನ್)ಫೆ.6:- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ  ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ  ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದೆ. ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಎದುರಿಸುವಂತಾಗಿದೆ.

ದೋಷಾರೋಪಣೆ ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೋಷಾರೋಪಣೆಯಿಂದ ಮುಕ್ತಗೊಳಿಸಲಾಗಿದೆ. ಸುಮಾರು ಎರಡು ವಾರಗಳ ವಿಚಾರಣೆಯ ನಂತರ, ಯುಎಸ್ ಸೆನೆಟ್ ಎಲ್ಲಾ ಆರೋಪಗಳ ಮೇಲೆ ಡೊನಾಲ್ಡ್ ಟ್ರಂಪ್‌ಗೆ ಕ್ಲೀನ್ ಚಿಟ್ ನೀಡಿದೆ.

ದೋಷಾರೋಪಣೆ ಆರೋಪದ ಎರಡು ಆರೋಪಗಳನ್ನು ಅಮೆರಿಕದ ಸೆನೆಟ್ ಬುಧವಾರ ಖುಲಾಸೆಗೊಳಿಸಿದೆ. ಅಧಿಕಾರ ದುರುಪಯೋಗ ಮತ್ತು ಸಂಸತ್ ತನಿಖೆಗೆ ಅಡ್ಡಿ ಕುರಿತು ವಾಗ್ದಂಡನೆ ಮಂಡಿಸಿತ್ತು. ಈ ವಿಚಾರ ಅಮೆರಿಕಾದ ಸೆನೆಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಈ ರೀತಿಯಾಗಿ ಡೊನಾಲ್ಡ್ ಟ್ರಂಪ್ ಚುನಾವಣಾ ವರ್ಷದಲ್ಲಿ ಪ್ರಮುಖ ರಾಜಕೀಯ ಮತ್ತು ನೈತಿಕ ಗೆಲುವು ಸಾಧಿಸಿದ್ದಾರೆ.

ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷಕರು ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಡೆಮಾಕ್ರೆಟಿಕ್ ಪಕ್ಷದ ವಾಗ್ದಂಡನೆ ದುರ್ಬಲದಿಂದ ಕೂಡಿದ್ದು, ಸಂವಿಧಾನದ ಅಪಾಯಕ ಕೃತ್ಯ ಎಂದು ಪ್ರತಿಪಾದಿಸಿದ್ದು,ಇದರಂತೆ ವಾಗ್ದಂಡನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು.

ಬಳಿಕ ಟ್ರಂಪ್ ವಿರುದ್ಧ ಕೇಳಿ ಬಂದ ಅಧಿಕಾರ ದುರುಪಯೋಗ ಆರೋಪದಿಂದ ಮುಕ್ತಗೊಳಿಸಲು ಮತದಾನ ನಡೆಯಿತು. ಈ ವೇಳೆ ಟ್ರಂಪ್ ಪರವಾಗಿ 52 ಮತಗಳು ಬಿದ್ದರೆ, ಟ್ರಂಪ್ ವಿರುದ್ಧವಾಗಿ 48 ಮತಗಳು ಬಂದಿದ್ದವು. ಈ ಮೂಲಕ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದಿರು. ಈ ಮೂಲಕ ಅಮೆರಿಕಾದ ಇತಿಹಾಸದಲ್ಲಿಯೇ ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಬಹುದಾದ ಜೋ ಬಿಡೆನ್ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಮಾಹಿತಿಯನ್ನು ಬಹಿರಂಗಪಡಿಸುವಂತೆ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದಕ್ಕಾಗಿ ಅಮೆರಿಕಾದಿಂದ ಉಕ್ರೇನ್ ಸೇನಾ ಕಾರ್ಯಾಚರಣೆಗಾಗಿ ಬಿಡುಗಡೆಯಾದ 400 ಮಿಲಿಯನ್ ಡಾಲರ್ ನ್ನು ಟ್ರಂಪ್ ತಡೆಹಿಡಿದಿದ್ದಾರೆಂದು ಹೇಳಲಾಗಿತ್ತು. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: