ಮನರಂಜನೆ

`ಅವತಾರ ಪುರುಷ’ ಸಿನಿಮಾದ ಟೀಸರ್ ರಿಲೀಸ್

ಬೆಂಗಳೂರು,ಫೆ.6-ನಟ ಶರಣ್ ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ತಾರೆಯರಿಂದ ಶರಣ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಶರಣ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿನಯದ `ಅವತಾರ ಪುರುಷ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕುತೂಹಲ ಹೆಚ್ಚಿಸುವ ಟೀಸರ್ ಇದಾಗಿದೆ.

ಪೋಸ್ಟರ್‌ಗಳಿಂದ ಗಮನ ಸೆಳೆದ ‘ಅವತಾರ ಪುರುಷ’ ಈಗ ಟೀಸರ್‌ ಹೊತ್ತು ಬಂದಿದ್ದಾನೆ. ಒಂದು ನಿಮಿಷ 45 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ಇಡೀ ಸಿನಿಮಾದ ಝಲಕ್‌ ತೋರಿಸಲಾಗಿದೆ. ಸಿನಿಮಾಗಳಲ್ಲಿ ನಟಿಸುವ ಜ್ಯೂನಿಯರ್‌ ಕಲಾವಿದನಾಗಿ ಶರಣ್ ‘ಅವತಾರ ಪುರುಷ’ದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ ಒಮ್ಮೆ ನಿಜಜೀವನದಲ್ಲಿಯೂ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್‌ ಕಥೆ.

ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದ್ದಾಗಿದ್ದು, ಶರಣ್ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸಾಯಿ ಕುಮಾರ್‌, ಭವ್ಯಾ, ಸುಧಾರಾಣಿ ಮುಂತಾದವರು ನಟಿಸುವ ಮೂಲಕ ಚಿತ್ರದ ತಾರಾ ಮೆರುಗು ಹೆಚ್ಚಿಸಿದ್ದಾರೆ. ಅವರೆಲ್ಲರ ಗೆಟಪ್‌ ಕೂಡ ವಿಭಿನ್ನವಾಗಿದೆ.

ಈಗಾಗಲೇ ಆ ಎಲ್ಲ ಪಾತ್ರಗಳ ಬಗ್ಗೆ ಪೋಸ್ಟರ್‌ ಮೂಲಕ ನಿರ್ದೇಶಕರು ಕಿರು ಪರಿಚಯ ಮಾಡಿಕೊಟ್ಟಿದ್ದರು. ಈಗ ಟೀಸರ್‌ ಮೂಲಕ ಇನ್ನಷ್ಟು ವಿವರ ಬಿಟ್ಟುಕೊಡಲಾಗಿದೆ. ಮಾಂತ್ರಿಕನ ಗೆಟಪ್‌ನಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ರಾಮಾ ಜೋಯಿಸ್‌ ಎಂಬ ಪಾತ್ರವನ್ನು ಸಾಯಿ ಕುಮಾರ್‌ ಮಾಡಿದ್ದಾರೆ. ಒಟ್ಟಾರೆ ಟೀಸರ್‌ ಕಂಡು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಸೆಲೆಬ್ರಿಟಿಗಳ ಕಡೆಯಿಂದಲೂ ಪ್ರಶಂಸೆ ಕೇಳಿ ಬರುತ್ತಿದೆ. (ಎಂ.ಎನ್)

 

Leave a Reply

comments

Related Articles

error: