ಮೈಸೂರು

ಎನ್.ಪಿ.ಎಸ್. ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಜರುಗಿದ ಫ್ರೆಂಚ್ ದಿನಾಚರಣೆ

ಈಚೆಗೆ  ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಫ್ರೆಂಚ್ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ 9ನೇ ಹಾಗೂ 10ನೇ ತರಗತಿಯ ಫ್ರೆಂಚ್ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಪ್ರಖ್ಯಾತ ಹಾಗೂ ಜನಪ್ರಿಯ ಮಧುರವಾದ ಪ್ರೆಂಚ್ ಗೀತೆ  ‘ಚಾಂಪ್ ಎಲಿಸಿಸ್’ ಪ್ರತಿಯೊಬ್ಬರನ್ನು ಫ್ರೆಂಚ್ ಲೋಕಕ್ಕೆ ಕರೆದೊಯ್ದಿತ್ತು. ಫುಟ್ ಟ್ಯಾಪಿಂಗ್ ನಿಂದ ನಡೆದ ಹಿಪ್-ಹಾಪ್ ನೃತ್ಯವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ವಿದ್ಯಾರ್ಥಿಗಳು ಸೆಲಿಬ್ರಿಟಿಗಳಂತೆ ರೆಡ್ ಕಾರ್ಪೆಟ್ ಮೇಲೆ  ಅತ್ಯಂತ ವಿಶ್ವಾಸದಿಂದ ರ್ಯಾಂಪ್ ವಾಕ್ ಮಾಡಿದರು.

ಕಾರ್ಯಕ್ರಮವು ಕೇವಲ ಮಾಹಿತಿ ಮನೋರಂಜನೆ ನೀಡದೆ, ಕುಳಿತಿದ್ದ ಪ್ರೇಕ್ಷಕರನ್ನು  ರೋಮಾಂಚನ ಹಾಗೂ ಸಾಹಸಕ್ಕೆ ಹೆಸರುವಾಸಿಯಾದ ಫ್ರೆಂಚ್ ಗೆ ಕರೆದುಕೊಂಡು ಹೋಗಿತ್ತು.

Leave a Reply

comments

Tags

Related Articles

error: