ಸುದ್ದಿ ಸಂಕ್ಷಿಪ್ತ

ಫೆ.7 : ವಿರಾಜಪೇಟೆಯಲ್ಲಿ ಯುವ ಕೌಶಲ್ಯ ಕಾರ್ಯಕ್ರಮ

ರಾಜ್ಯ(ಮಡಿಕೇರಿ) ಫೆ.6 :- ಜಿಲ್ಲಾ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಡಿಕೇರಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಡಿಕೇರಿ ಇವರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆಯಲ್ಲಿ ಫೆ.7 ರಂದು ಒಂದು ದಿನದ ಯುವ ಕೌಶಲ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ 18 ರಿಂದ 35 ವಯೋಮಾನದೊಳಗಿನ ಎಸ್.ಎಸ್ ಎಲ್.ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮೋ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಯುವ ಕೌಶಲ್ಯ ತರಬೇತಿ ನೀಡಿ ಉದ್ಯೋಗವಕಾಶ ಮಟ್ಟವನ್ನು ಹೆಚ್ಚಿಸುವ, ಸಮಾಲೋಚನೆಯನ್ನು ನಡೆಸಿ ಅವರಲ್ಲಿರುವ ಕೊರತೆಯನ್ನು ದೂರ ಮಾಡಲು ತರಬೇತಿ ನೀಡಿ ಮೌಲ್ಯಮಾಪನ ಮಾಡಲಾಗುತ್ತದೆ.
ಭಾಗವಹಿಸುವ ಆಸಕ್ತ ಯುವಕ-ಯುವತಿಯರು www.kaushalkar.com ನೋಂದಣಿ ಮಾಡಿಕೊಳ್ಳಬೇಕು ಅಥವಾ ನೇರವಾಗಿ ಭಾಗವಹಿಸಬಹುದಾಗಿದೆ.

Leave a Reply

comments

Related Articles

error: