ಮೈಸೂರು

ಮಹಾರಾಣಿ ಕಾಲೇಜಿನಲ್ಲಿ ಪೋಷಕರ ಸಭೆ

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕಾಲೇಜಿನ ಕಲಾ ಮಂಟಪದಲ್ಲಿ ಪೋಷಕರ ಸಭೆಯನ್ನು  ಆಯೋಜಿಸಲಾಗಿತ್ತು.

ಸಭೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಪೋಷಕರ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ನಾಗರಾಜು ಮಾತನಾಡಿ ಕಾಲೇಜು ಈ ವರ್ಷ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಈ ಕಾಲೇಜಿನ ಶತಮಾನೋತ್ಸವ ಸಂಭ್ರಮಾಚರಣೆ ವಿವಿಧ ಕಾರ್ಯಕ್ರಮದ ಹಾಗೂ ವಿದ್ಯಾರ್ಥಿಗಳ ಕುಂದು ಕೊರತೆಯ ಕುರಿತು ಸಭೆ ಕರೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿರುವ 411 ಸರ್ಕಾರಿ ಕಾಲೇಜುಗಳಲ್ಲಿರುವ ನ್ಯಾಕ್ ಸಮಿತಿಯು ನಡೆಸಿದ ಸಮೀಕ್ಷೇಯಲ್ಲಿ ಎ ಗ್ರೇಡ್ ಪಡೆದಿರುವ 5 ಕಾಲೇಜುಗಳಲ್ಲಿ  ನಮ್ಮ ಮಹಾರಾಣಿ ವಿಜ್ಞಾನ ಕಾಲೇಜು ಕೂಡಾ ಒಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಪೋಷಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಸಭೆಯಲ್ಲಿ  ಸಂಚಾಲಕ ಡಾ.ಎಂ.ಎನ್.ಶ್ರೀನಿವಾಸ್, ಗೆಜೆಟೆಡ್ ಮ್ಯಾನೇಜರ್ ಆರೀಫಾ ಸುಲ್ತಾನ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿಜಯಕುಮಾರಿ, ಐಕ್ಯುಎಸಿ ಸಂಚಾಲಕಿ ಡಾ.ಸವಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

 

Leave a Reply

comments

Related Articles

error: