ದೇಶಪ್ರಮುಖ ಸುದ್ದಿ

ಈ ಗೆಲುವು ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ : ರಾಜನಾಥ್‌ ಸಿಂಗ್ ಸಂತಸ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ಭರ್ಜರೀ ಗೆಲುವು ಎಂದು ಬಣ್ಣಿಸಿದ್ದಾರೆ.

ಪಕ್ಷದ ಗೆಲುವು ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಿದೆ. ಇದು ಕೇವಲ ಗೆಲುವಲ್ಲ, ಭರ್ಜರಿ ಗೆಲುವು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಟ್ಟಿರುವ ಜನರ ಗೆಲುವು. ನಾಯಕತ್ವ ಹಾಗೂ ಉತ್ತಮ ಆಡಳಿತದ ಬಗ್ಗೆ ಪಕ್ಷದ ಬದ್ಧತೆಯ ಗೆಲುವಾಗಿದೆ ಎಂದು ಹೇಳಿದ್ದಾರೆ.

ಉತ್ತಮ ಸಂಘಟನಾ ಸಾಮರ್ಥ್ಯವಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾ ಮತ್ತು ಪಕ್ಷದ ಕಾರ್ಯಕರ್ತರು ಈ ಗೆಲುವಿನ ರೂವಾರಿಗಳು. ಉತ್ತರ ಪ್ರದೇಶದಲ್ಲಿ ಕಳೆದ 30 ವರ್ಷಗಳಲ್ಲೇ ಅದ್ಭತ ಗೆಲುವು ಪಕ್ಷಕ್ಕೆ ಲಭಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ ರಾಜ್ಯದ ಜನತೆಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

(ಎನ್‍.ಬಿಎನ್)

Leave a Reply

comments

Related Articles

error: