ಮೈಸೂರು

ಮೈಸೂರು ವಾರಿಯರ್ಸ್ ತಂಡದ ‘ನೀ ಸಲಾಮ್ ಹೊಡಿ’ ತಂಡದ ಗೀತೆ ಬಿಡುಗಡೆ

ಮೈಸೂರು ವಾರಿಯರ್ಸ್ ಅತ್ಯಂತ ಬಲಿಷ್ಠ ಹಾಗೂ ಭರವಸೆಯ ತಂಡವಾಗಿದೆ, ಈ ತಂಡಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದು ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ ರಘು ದೀಕ್ಷಿತ್ ತಿಳಿಸಿದರು.

ಸೈಕಲ ಪ್ಯೂರ್ ಅಗರಬತ್ತಿ ತಯಾರಕರು ಹಾಗೂ ಮೈಸೂರು ವಾರಿಯರ್ಸ್ ತಂಡದ ಮಾಲೀಕರು, ತಂಡಕ್ಕೆ ಹೊಸ ಚೈತನ್ಯವನ್ನು ತುಂಬಲು ‘ನೀ ಸಲಾಮ್ ಹೊಡಿ’ ಎನ್ನುವ ಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ ಸಂಗೀತಕ್ಕೆ ಯಾವುದೇ ಪ್ರದೇಶ, ಭಾಷೆ ಅಥವಾ ಧರ್ಮದ ಭೇದವಿಲ್ಲ, ಸಾಂಸ್ಕೃತಿಕ ನಗರಿ ಮೈಸೂರು ಐತಿಹಾಸಿ ಪರಂಪರೆಯನ್ನು ಹೊಂದಿದೆ  ‘ನೀ ಸಲಾಮ ಹೊಡಿ’ ಗೀತೆಯು ಜಾನಪದ ಸೊಗಡಿನೊಂದಿಗೆ ಸಮಕಾಲೀನ ಸಂಗೀತದಲ್ಲಿ ಸಂಯೋಜಿಸಲಾಗಿದು ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಯುವ ಸಮೂಹಕ್ಕೆ ಗೀತೆಯು ವಿಶೇಷ ಆಕರ್ಷಣೆಯಾಗಿದ್ದು ತಂಡಕ್ಕೆ ಹೊಸ ಚೈತನ್ಯ ತುಂಬಿದೆ ಎಂದು ತಿಳಿಸಿದರು. ಗೀತೆಯನ್ನು http;//youtu.be/T.VBjRbWey?a ಅಲ್ಲಿ ವೀಕ್ಷಿಸಬಹುದು.

Leave a Reply

comments

Tags

Related Articles

error: