ಮೈಸೂರು

ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಕಾರ್ಯಕ್ರಮ

ಮೈಸೂರು, ಫೆ.7:- ಇತ್ತೀಚೆಗೆ ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾಜದಲ್ಲಿ ನೀತಿ ನಿಯಮಗಳು, ಮಾನವೀಯ ಮೌಲ್ಯಗಳು ಮತ್ತು ಆದರ್ಶ ಸಮಾಜದ ನಿರ್ಮಾಣದಲ್ಲಿ ಮಾಧ್ಯಮದ ಕಾರ್ಯವೈಖರಿಯನ್ನು ಕುರಿತಂತೆ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ವಿದೂಷಿ ಶ್ರಾವಣಿ ಯವರು ಮತ್ತು ಎಂ ಡಿ ಈ ಎಸ್ ನ ಮುಖ್ಯ ಕಾರ್ಯದರ್ಶಿಗಳು, ವಂ. ಗುರುಗಳಾದ ವಿಜಯ್ ಕುಮಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರೊ. ಆರ್ ಎನ್ ಪದ್ಮನಾಭ್, ವಿಶ್ರಾಂತ ಪ್ರಾಧ್ಯಾಪಕರು, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು ಮತ್ತು ಡಾ. ಕೆ ಜೆ ಜೋಸೆಫ್, ವಿಶ್ರಾಂತ ಪ್ರಾಧ್ಯಾಪಕರು, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಸೆಬಿ ಮ್ಯಾವ್ಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂತ ಜೋಸೆಫರ ಕಾಲೇಜುಗಳು ಮತ್ತು ಡಾ. ನಿವೇದಿತಾ, ಪ್ರಾಂಶುಪಾಲರು ಮತ್ತು ಮುಖ್ಯಸ್ಥರು, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜು ಉಪಸ್ಥಿತರಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಮೈಸೂರು ಸುತ್ತಮುತ್ತಲಿನ ಸುಮಾರು 20 ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕುರಿತು ಮಾತನಾಡಿದ ವಿದೂಷಿ ಶ್ರಾವಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಂ. ಗುರುಗಳಾದ ವಿಜಯ್ ಕುಮಾರ್ ಅಧ್ಯಕ್ಷೀಯ ಮಾತುಗಳನ್ನಾಡಿ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಾರ್ತಾಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಕಾರ್ಯಕ್ರಮವನ್ನು ಶ್ಲಾಘಸಿದರು.
ಪ್ರಸ್ತುತ ಮಾಧ್ಯಮ ಲೋಕದ ವಿದ್ಯಮಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಮೆಲಾಂಜ್ 20’ ರಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಫಾಸ್ಟೆಸ್ಟ್ ಫಿಂಗರ್ ಫಸ್ಟ್, ಮ್ಯಾಡ್ ಆಡ್ಸ್, ಪ್ಯಾನಲ್ ಡಿಸ್ಕಷನ್, ಶೀರ್ಷಿಕೆ ಬರವಣಿಗೆ,ರಸಪ್ರಶ್ನೆ, ಟಿಕ್ ಟಾಕ್ ಮತ್ತು ಛಾಯಾಚಿತ್ರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು ಈ ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾದ ವಿದ್ಯಾರ್ಥಿಗಳ ಪಟ್ಟಿ ಇಂತಿದೆ.

ಫಾಸ್ಟೆಸ್ಟ್ ಫಿಂಗರ್ ಫೆಸ್ಟ್ – ಪ್ರಥಮ ಬಹುಮಾನ – ಪಾರ್ಥವೈದ್ಯ, ಮಹಾರಾಜಾ ಕಾಲೇಜು, ದ್ವಿತೀಯ ಬಹುಮಾನ – ಅಚ್ಯುತ್ ಕಾರ್ತಿಕ್, ಸೇಪಿಯಂಟ್.
ಮ್ಯಾಡ್ ಆಡ್ಸ್ – ಪ್ರಥಮ ಬಹುಮಾನ – ಶೃತಿ ಮೊಳ್ ಮತ್ತು ತಂಡ, ಕ್ರೈಸ್ಟ್ ಕಾಲೇಜು, ದ್ವಿತೀಯ ಬಹುಮಾನ – ಓಂಕಾರೇಶ್ವರ ಸ್ವಾಮಿ ಮತ್ತು ತಂಡ – ಮಹಾರಾಜಾ ಕಾಲೇಜು., ಪ್ಯಾನಲ್ ಡಿಸ್ಕಷನ್
ಪ್ರಥಮ ಬಹುಮಾನ – ಕೀರ್ತನ ಮತ್ತು ತಂಡ – ಮಹಾರಾಣಿ ಕಾಲೇಜು, ದ್ವಿತೀಯ ಬಹುಮಾನ -ಐಶ್ವರ್ಯ ಮತ್ತು ತಂಡ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಸನ.
ಶೀರ್ಷಿಕೆ ಬರವಣಿಗೆ ಪ್ರಥಮ ಬಹುಮಾನ – ಓಂಕಾರೇಶ್ವರ ಸ್ವಾಮಿ, ಮಹಾರಾಜಾ ಕಾಲೇಜು, ದ್ವಿತೀಯ ಬಹುಮಾನ -ಕ್ಷಮಾ, ಮಹಾರಾಜಾ ಕಾಲೇಜು ಮತ್ತು ಗಿರೀಶ ಡೀ ಎಸ್, ಸರ್ಕಾರಿ ಕಲಾ ಕಾಲೇಜು, ಹಾಸನ. ರಸಪ್ರಶ್ನೆ ಪ್ರಥಮ ಬಹುಮಾನ – ಇಂದ್ರ ಮೋಹನ್ ಮತ್ತು ಕೀರ್ತಿ ಕಿರಣ್, ಮಹಾರಾಜಾ ಕಾಲೇಜು, ದ್ವಿತೀಯ ಬಹುಮಾನ – ಅಂಜನ ಮತ್ತು ಮೋನಿಕಾ – ಮಹಾಜನಾ ಕಾಲೇಜು. ಟಿಕ್ ಟಾಕ್
ಪ್ರಥಮ ಬಹುಮಾನ – ಜಿತೇಶ್ ಪ್ರಧಾನ್ – ಸಂತ ಫಿಲೋಮಿನಾ ಕಾಲೇಜು, ದ್ವಿತೀಯ ಬಹುಮಾನ – ಕಾರ್ತಿಕ್ ಎಂ – ಮಹಾರಾಜಾ ಕಾಲೇಜು. ಛಾಯಾಚಿತ್ರ ಸ್ಪರ್ಧೆ ಪ್ರಥಮ ಬಹುಮಾನ – ಅರುಣ್ ಕುಮಾರ್, ಕ್ರೈಸ್ಟ್ ಕಾಲೇಜು, ದ್ವಿತೀಯ ಬಹುಮಾನ – ಶಶಾಂಕ್ ಪಿ ಎಸ್ – ಎನ್ ಐ ಈ ಕಾಲೇಜು.
ಸಮಗ್ರ ಪ್ರಶಸ್ತಿ – ಮಹಾರಾಜಾ ಕಾಲೇಜು, ಮೈಸೂರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: