ಮೈಸೂರು

ಬೆಸ್ಟ್ ಇನ್‌ಸ್ಟಿಟ್ಯೂಷನ್ ಅವಾರ್ಡ್‌ಗೆ ಸುತ್ತೂರಿನ ಜೆಎಸ್‌ಎಸ್ ಪ್ರೌಢಶಾಲೆಯ ಎನ್‌ಸಿಸಿ ಭೂದಳ ಭಾಜನ

ಮೈಸೂರು,ಫೆ.8:-  ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ವತಿಯಿಂದ ಪ್ರತಿ ವರ್ಷ ನೀಡಲಾಗುವ ಬೆಸ್ಟ್ ಇನ್‌ಸ್ಟಿಟ್ಯೂಷನ್ ಅವಾರ್ಡ್‌ಗೆ ಸುತ್ತೂರಿನ ಜೆಎಸ್‌ಎಸ್ ಪ್ರೌಢಶಾಲೆಯ ಎನ್‌ಸಿಸಿ ಭೂದಳ ಸತತ 5ನೇ ಬಾರಿಗೆ ಭಾಜನವಾಗಿದೆ.

ಇಲ್ಲಿನ ಎನ್‌ಸಿಸಿ ಭೂದಳದ ಕೆಡೆಟ್‌ಗಳು ವಿವಿಧ ಶಿಬಿರಗಳಲ್ಲಿ ಭಾಗವಹಿಸಿ ಕವಾಯತು, ನೃತ್ಯ, ಆಟೋಟ, ಫೈರಿಂಗ್ ಮುಂತಾದ ಚಟುವಟಿಕೆಗಳಲ್ಲಿ ಸಮಗ್ರ ಬಹುಮಾನ ಪಡೆದಿದ್ದಾರೆ. ಅಲ್ಲದೆ ಹಲವಾರು ಕೆಡೆಟ್‌ಗಳು ತಾಲ್ ಸೈನಿಕ, ಗಣರಾಜ್ಯೋತ್ಸವ, ಟ್ರಕ್ಕಿಂಗ್, ಸ್ವಚ್ಛಭಾರತ್, ಶ್ರೇಷ್ಠ್‌ಭಾರತ್ ಶಿಬಿರಗಳಲ್ಲಿ ಭಾಗವಹಿಸಿ ಶಿಸ್ತಿನ ಸಿಪಾಯಿಗಳೆನಿಸಿಕೊಂಡು ಅನೇಕ ಬಹುಮಾನಗಳನ್ನು ಪಡೆಯುವ ಮೂಲಕ ಶಾಲಾ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದನ್ನು ಪರಿಗಣಿಸಿ ಈ ಅವಾರ್ಡ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ  ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಕರ್ನಲ್ ಲಲಿತ್ ಕುಮಾರ್ ಜೈನ್ ಅವರಿಂದ ಮುಖ್ಯಶಿಕ್ಷಕಿ ಸಿ.ಪಿ.ನಿರ್ಮಲಾ ಬೆಸ್ಟ್ ಇನ್‌ಸ್ಟಿಟ್ಯೂಷನ್ ಅವಾರ್ಡ್ ಪಡೆದುಕೊಂಡರು. ಶಾಲೆಯ ಎನ್‌ಸಿಸಿ ಕೆಡೆಟ್‌ಗಳ ಈ ಸಾಧನೆಗೆ ಮೈಸೂರು ಎನ್‌ಸಿಸಿ ಗ್ರೂಪ್‌ನ ಕಮಾಂಡರ್ ಕರ್ನಲ್ ಪಿ.ಟಿ.ರಾಜೀವ್ ಹಾಗೂ 13ನೇ ಕರ್ನಾಟಕ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ರಾಜೇಶ್‌ಕುಮಾರ್ ಅಭಿನಂದಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: