ಪ್ರಮುಖ ಸುದ್ದಿಮೈಸೂರು

 ಶ್ರೀರಂಗಪಟ್ಟಣ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ : ಹೆದ್ದಾರಿಯಲ್ಲಿ ದರೋಡೆ ನಡೆಸಿದ ಮೈಸೂರು ಮೂಲದ 9 ಮಂದಿ ದರೋಡೆಕೋರರ ಬಂಧನ

ಮಂಡ್ಯ/ಮೈಸೂರು,ಫೆ.8:-  ಶ್ರೀರಂಗಪಟ್ಟಣ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆದ್ದಾರಿಯಲ್ಲಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ 9 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಪರಶುರಾಮ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಪರಶುರಾಮ್ ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಖದೀಮರು ಈಗ ಪೊಲೀಸರ ಕೈಗೆ ಸೆರೆಯಾಗಿದ್ದು, ಬಂಧಿತರಿಂದ 2,54,570 ರೂ. ಮೌಲ್ಯದ ಮಾಲುಗಳನ್ನು ವಶಪಡಸಿಕೊಳ್ಳಲಾಗಿದೆ. ಸುಲಿಗೆ ಮಾಡಿದ್ದ 11 ಮೊಬೈಲ್, 1400 ರೂ. ನಗದು, ಅಪರಾಧಕ್ಕೆ ಬಳಸಿದ್ದ ಮಾರುತಿ ಓಮಿನಿ ಕಾರು, 2 ಸ್ಕೂಟರ್, ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಮೈಸೂರು ಮೂಲದವರಾಗಿದ್ದು, ಉಪೇಂದ್ರ ಅಲಿಯಾಸ್ ಉಪ್ಪಿ, ಕಿರಣ ಅಲಿಯಾಸ್ ಇಸ್ಕಿ, ಪ್ರತಾಪ ಅಲಿಯಾಸ್ ಆಪು, ಮಾದಪ್ಪ ಅಲಿಯಾಸ್ ಶಿವು, ಶೇಖರ, ಅನೂಜ್ ಅಲಿಯಾಸ್ ಇಡ್ಲಿ, ಕಿರಣ ಅಲಿಯಾಸ್ ಆನೆ, ರವಿಕುಮಾರ ಅಲಿಯಾಸ್ ಅಬ್ಬು, ಶಿವಕುಮಾರ ಅಲಿಯಾಸ್ ಶಿವು ಎಂಬವರಾಗಿದ್ದಾರೆ. ಇವರು ಶ್ರೀರಂಗಪಟ್ಟಣ, ಅರಕೆರೆ ಠಾಣೆ ವ್ಯಾಪ್ತಿಯಲ್ಲಿ ದರೋಡೆ ನಡೆಸಿದ್ದರು.  ಮಂಡ್ಯದ ಶ್ರೀರಂಗಪಟ್ಟಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದರು. ರಾತ್ರಿ ವೇಳೆ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರೆಂದು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: